ನವದೆಹಲಿ: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ವರದಿಯಾಗಿರುವ 13 ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ದೆಹಲಿ ಮಹಿಳಾ ಆಯೋಗದಮುಖ್ಯಸ್ಥೆ ಸ್ವಾತಿ ಮಲಿವಾಲ್ (ಡಿಸಿಡಬ್ಲ್ಯು) ಪತ್ರ ಬರೆದಿದ್ದಾರೆ.
ಆರೋಪಿಗಳ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಬೇಕು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾಗದ ಆರೋಪದ ಮೇಲೆ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಬೇಕು ಎಂದುಮಲಿವಾಲ್ ಒತ್ತಾಯಿಸಿದ್ದಾರೆ.
ಪ್ರಕರಣವನ್ನು ಅಪರಾಧ ವಿಭಾಗವು ಮುಕ್ತ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಶಿಫಾರಸು ಮಾಡಿರುವ ಅವರು, ಸಂತ್ರಸ್ತ ಬಾಲಕಿಯ ಕುಟುಂಬದವರಿಗೆ ಆರ್ಥಿಕ ನೆರವು ಒದಗಿಸಬೇಕು ಮತ್ತು ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಬೇಕು ಎಂದು ಮನವಿ ಮಾಡಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿಂತೆಸಂತ್ರಸ್ತ ಬಾಲಕಿಯ ತಾಯಿಡಿಸಿಡಬ್ಲ್ಯುಗೆ ದೂರು ನೀಡಿದ್ದಾರೆ. ಅವರು ತಮ್ಮದೂರಿನಲ್ಲಿ,ಮೇ 12ರಂದು ಸಂಜೆ, ಇಬ್ಬರು ಚಿಕ್ಕ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ. ಮನೆಗೆ ಮರಳುವ ವೇಳೆ ಪಕ್ಕದ ಮನೆಯವರ ಮಗಳು ಇಬ್ಬರು ಸೋದರ ಸಂಬಂಧಿಗಳೊಂದಿಗೆ (ಪುರುಷರೊಂದಿಗೆ)ನಮ್ಮ ಮನೆಯಿಂದ ಓಡಿ ಹೋಗುತ್ತಿರುವುದನ್ನು ನೋಡಿದೆ. ಮನೆಯೊಳಗೆ ಹೋದಾಗ, ಮಗಳು ಗಂಭೀರವಾಗಿ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದಳು ಎಂದು ತಿಳಿಸಿದ್ದಾರೆ.
ಹಾಗೆಯೇ, ಹುಡುಗರು ತನ್ನ ಮೇಲೆ ಹಲ್ಲೆಗೈದು, ಭೀಕರವಾಗಿ ಅತ್ಯಾಚಾರ ನಡೆಸಿದರು ಎಂದು ಮಗಳು ಹೇಳಿರುವುದಾಗಿಯೂ ಉಲ್ಲೇಖಿಸಿದ್ದಾರೆ.
ಬಾಲಕಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಘಟನೆ ನಡೆದ ನಾಲ್ಕು ಗಂಟೆ ಕಳೆಯುವುದರೊಳಗೆ ಆಕೆ ಕೋಮಾ ಸ್ಥಿತಿ ತಲುಪಿದ್ದಳು. ಮೇ 16ರಂದು ಮೀರತ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಆದಾಗ್ಯೂ, ಸಂತ್ರಸ್ತೆ ಮೇ 18ರಂದು ಮೃತಪಟ್ಟಿದ್ದಳು ಎಂದುಡಿಸಿಡಬ್ಲ್ಯು ಮಾಹಿತಿ ನೀಡಿದೆ.
ಮಲಿವಾಲ್ ಅವರು ಜೂನ್ 4ರಂದು ಮೃತ ಬಾಲಕಿಯ ಪೋಷಕರನ್ನು ಭೇಟಿಯಾದಾಗ, ಪ್ರಕರಣ ಸಂಬಂಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂಬುದು ತಿಳಿದು ಬಂದಿತ್ತು.ಮರಣೋತ್ತರ ಪರೀಕ್ಷೆ ವರದಿಯಲ್ಲಿಯೂ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು. ಆದಾಗ್ಯೂ ಪೊಲೀಸರು ಬಾಲಕಿ ಬೇರೊಬ್ಬರೊಂದಿಗೆ 'ಸಂಬಂಧ ಹೊಂದಿದ್ದಳು' ಎಂದು ಹೇಳಿದ್ದರು. ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ. ಚಿಕಿತ್ಸೆಗಾಗಿ ₹ 9 ಲಕ್ಷ ಖರ್ಚು ಮಾಡಿದರೂ, ದುರದೃಷ್ಟವಶಾತ್ ಮಗಳು ಉಳಿಯಲಿಲ್ಲ ಎಂದು ಪೋಷಕರು ನೋವು ತೋಡಿಕೊಂಡಿದ್ದರು ಎಂದುಡಿಸಿಡಬ್ಲ್ಯು ಪ್ರಕಟಣೆಯಲ್ಲಿ ತಿಳಿಸಿದೆ.
'ಪ್ರಕರಣ ನಡೆದು 24 ದಿನಗಳು ಕಳೆದರೂ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದಿರುವುದು ಆಘಾತ ತಂದಿದೆ. ಬಾಲಕಿಯೊಂದಿಗೆ ಎಷ್ಟು ಕ್ರೂರವಾಗಿ ನಡೆದುಕೊಳ್ಳಲಾಗಿದೆ ಎಂಬುದನ್ನು ವಿವರಿಸುವ ಮರಣೋತ್ತರ ಪರೀಕ್ಷೆ ವರದಿಯನ್ನು ಓದಿದ್ದೇನೆ. ಪ್ರಕರಣ ಸಂಬಂಧಕೂಡಲೇ ಎಫ್‌ಐಆರ್ ದಾಖಲಾಗಬೇಕು ಮತ್ತು ಆರೋಪಿಗಳನ್ನು ಶೀಘ್ರ ಬಂಧಿಸಬೇಕು' ಎಂದು ಮಲಿವಾಲ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.