ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿ, ಮಾನವಹಕ್ಕು ಹೋರಾಟಗಾರ ಮತ್ತು ಪತ್ರಕರ್ತ ಗೌತಮ್ ನವಲಖಾ ಅವರಿಗೆ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಜಾಮೀನು ನೀಡಿದೆ.
ನವಲಖಾ ಅವರನ್ನು ಎನ್‌ಐಎ 2020ರ ಏಪ್ರಿಲ್ 14ರಂದು ಬಂಧಿಸಿತ್ತು. ಮಾವೊವಾದಿಗಳ ಜತೆ ಸಂಪರ್ಕ ಹೊಂದಿರುವ ಆರೋಪ ಇವರ ಮೇಲಿತ್ತು.
ನ್ಯಾಯಮೂರ್ತಿ ಎ.ಎಸ್. ಗಡ್ಕರಿ ಮತ್ತು ನ್ಯಾಯಮೂರ್ತಿ ಎಸ್.ಜಿ. ಡಿಗೆ ಅವರನ್ನೊಳಗೊಂಡ ಪೀಠವು, ₹ 1 ಲಕ್ಷ ಭದ್ರತಾ ಠೇವಣಿ ಇಡಲು ಸೂಚಿಸಿ ಜಾಮೀನು ನೀಡಿತು.
ಆದರೆ, ಜಾಮೀನು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಎನ್‌ಐಎ ಅವಕಾಶ ಕೋರಿದ್ದರಿಂದ ಜಾಮೀನು ಆದೇಶವನ್ನು ಮೂರು ವಾರಗಳವರೆಗೆ ತಡೆಹಿಡಿಯಿತು. ನವೆಂಬರ್‌ನಲ್ಲಿ ನವಲಖಾ ಅವರನ್ನು ಗೃಹ ಬಂಧನದಲ್ಲಿರಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆಗಿನಿಂದ ಅವರು ನವಿ ಮುಂಬೈನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.