ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಟೊ, ಕ್ಯಾಬ್ ಚಾಲಕರು ಒಳಗೊಂಡಂತೆ ಸಾರ್ವಜನಿಕ ಸೇವಾ ವಾಹನಗಳ ಚಾಲಕರು ಲಿಂಗ ಸೂಕ್ಷ್ಮತೆ ಕುರಿತು ತರಬೇತಿ ಪಡೆಯುವುದು ಇನ್ನು ಮುಂದೆ ಕಡ್ಡಾಯ. ತರಬೇತಿ ಪಡೆಯದಿದ್ದಲ್ಲಿ ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ಕೂಡಾ ಇಂಥ ನಿಯಮ ಇತ್ತು. ಈಗ ಕೆಲ ಬದಲಾವಣೆಗಳೊಂದಿಗೆ ಪರಿಷ್ಕರಿಸಲಾಗಿದೆ ಎಂದು ದೆಹಲಿ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನವಲೇಂದ್ರ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ.
ಆಟೊ ಮತ್ತು ವಾಣಿಜ್ಯ ಬಳಕೆಗೆ ಲಘು ವಾಹನಗಳ ಚಾಲಕರು, ವಾಹನಗಳಿಗೆ ಫಿಟ್‌ನೆಸ್ ಪ್ರಮಾಣಪತ್ರ ಪಡೆಯುವ ಮುನ್ನ ಇಂಥ ತರಬೇತಿ ಪಡೆಯುವುದು ಕಡ್ಡಾಯ. ಚಾಲನಾ ಮತ್ತು ಸಂಚಾರ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಮಾನಸ್ ಫೌಂಡೇಷನ್ ತರಬೇತಿ ನೀಡಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.