ADVERTISEMENT

ಜೋಶಿಮಠ ಭೂಕುಸಿತ: ಹೈದರಾಬಾದ್‌ನ ಎನ್‌ಜಿಆರ್‌ಐ ತಜ್ಞರ ತಂಡದಿಂದ ಅಧ್ಯಯನ

ಪಿಟಿಐ
Published 12 ಜನವರಿ 2023, 6:24 IST
Last Updated 12 ಜನವರಿ 2023, 6:24 IST
   

ಹೈದರಾಬಾದ್: ಉತ್ತರಾಖಂಡದ ಜೋಶಿಮಠದ ಭೂಕುಸಿತದ ಅಧ್ಯಯನ ನಡೆಸಲು ಹೈದರಾಬಾದ್‌ನ ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಆರ್‌ಐ) ತಜ್ಞರ ತಂಡ ತೆರಳಲಿದೆ ಎಂದು ವಿಜ್ಞಾನಿ ಆನಂದ್ ಕೆ. ಪಾಂಡೆ ತಿಳಿಸಿದ್ದಾರೆ.

ಎನ್‌ಜಿಆರ್‌ಐನ ವಿಜ್ಞಾನಿ ಆನಂದ್ ಕೆ. ಪಾಂಡೆ ನೇತೃತ್ವದ 10 ಮಂದಿಯ ತಜ್ಞರ ತಂಡವು ಜನವರಿ 13ರಂದು ಉತ್ತರಾಖಂಡಕ್ಕೆ ತಲುಪಲಿದ್ದು, ಮರುದಿನವೇ ಕೆಲಸ ಪ್ರಾರಂಭಿಸುವ ನಿರೀಕ್ಷೆಯಿದೆ.

ತಜ್ಞರ ತಂಡವು ಎರಡು ವಾರಗಳ ಕಾಲ ವಿಪತ್ತಿಗೆ ನಿಖರ ಕಾರಣವನ್ನು ಅಧ್ಯಯನ ನಡೆಸಲಿದೆ.

ADVERTISEMENT

ಉತ್ತರಾಖಂಡದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಭೂಕಂಪ, ಪ್ರವಾಹ, ಭೂಕುಸಿತದ ಪ್ರದೇಶಗಳಲ್ಲಿ ಹಲವಾರು ಅಧ್ಯಯನ ಕಾರ್ಯಗಳನ್ನು ನಡೆಸಲಾಗಿದೆ ಎಂದು ಆನಂದ್ ಕೆ. ಪಾಂಡೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.