ADVERTISEMENT

ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 7:07 IST
Last Updated 29 ಜನವರಿ 2019, 7:07 IST
   

ನವದೆಹಲಿ:ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌(88) ಮಂಗಳವಾರ ನಿಧನರಾದರು.

ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಫರ್ನಾಂಡಿಸ್‌ ರಕ್ಷಣಾ ಸಚಿವರಾಗಿದ್ದರು.ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು.

ADVERTISEMENT

ಪಾದ್ರಿಯಾಗಲು ಅಗತ್ಯವಿದ್ದ ತರಬೇತಿ ಹಾಗೂ ಕಲಿಕೆಗಾಗಿ ಅವರ 16ನೇ ವಯಸ್ಸಿನಲ್ಲಿ ಕಳುಹಿಸಲಾಗಿತ್ತು. ಆದರೆ, ಸಮಾಜಮುಖಿಯಾದ ಬೇರೆಯದೇ ಚಿಂತನೆಗಳನ್ನು ಹೊಂದಿದ್ದ ಜಾರ್ಜ್‌ 1949ರಲ್ಲಿ ಬಾಂಬೆಗೆ ತೆರಳಿ, ಕಾರ್ಮಿಕ ಸಂಘನೆಯ ಹೋರಾಟಗಳಲ್ಲಿ ಭಾಗಿಯಾದರು.

ಬೆಂಕಿಯ ಚೆಂಡಿನಂತೆ ಹೋರಾಟಗಳಲ್ಲಿ ಮುನ್ನಡೆಸುತ್ತಿದ್ದ ಜಾರ್ಜ್‌ ಹಲವು ಪ್ರಮುಖ ಪ್ರತಿಭಟನೆಗಳು ಹಾಗೂ ಬಂದ್‌ಗಳ ನೇತೃತ್ವವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.