ಬರ್ಲಿನ್: ಜರ್ಮನಿಯಲ್ಲಿ 16 ವರ್ಷಗಳ ಕಾಲ ಆಡಳಿತ ನಡೆಸಿದ ಚಾನ್ಸಲರ್ ಆಂಗೆಲಾ ಮೆರ್ಕೆಲ್ ಅವರ ಉತ್ತಾರಾಧಿಕಾರಿ ಆಯ್ಕೆಗೆ ಎರಡೂ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಆರಂಭಿಸಿವೆ. ಮಾತುಕತೆಯು ಉತ್ತಮ ಆರಂಭ ಪಡೆದುಕೊಂಡಿದೆ.
ಭಾನುವಾರ ನಡೆದ ಸಂಸತ್ತಿನ ಚುನಾವಣೆಯಲ್ಲಿ ಜರ್ಮನಿಯ ಸಾಂಪ್ರದಾಯಿಕ ದೊಡ್ಡ ಪಕ್ಷಗಳಾದ ಸೆಂಟರ್–ರೈಟ್ ಯೂನಿಯನ್ ಬಣ ಹಾಗೂ ಸೆಂಟರ್ ಲೆಫ್ಟ್ ಸೋಷಿಯಲ್ ಡೆಮಾಕ್ರಟಿಕ್ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿರುವ ಪಕ್ಷಗಳಾದ ಪರಿಸರವಾದಿ ಗ್ರೀನ್ಸ್ ಮತ್ತು ವ್ಯಾಪಾರ ಸ್ನೇಹಿ ಫ್ರೀ ಡೆಮೋಕ್ರಾಟ್‌ಗಳ ಬೆಂಬಲ ಪಡೆಯಬೇಕಾಯಿತು.
ಚುನಾವಣೆಯಲ್ಲಿ ವಿಜೇತರಾದ ಓಲಾಫ್ ಸ್ಕೋಲ್ಜ್ ಅವರ ಸೆಂಟರ್ ಲೆಫ್ಟ್ ಸೋಷಿಯಲ್ ಡೆಮಾಕ್ರಟಿಕ್ ಕಡೆಗೆ ಗ್ರೀನ್ಸ್ ಒಲವು ತೋರಿದೆ. ಸ್ವತಂತ್ರ ಪ್ರಜಾಪ್ರಭುತ್ವವಾದಿಗಳು ಮೆರ್ಕೆಲ್ ಅವರ ಸೆಂಟರ್–ರೈಟ್ ಯೂನಿಯನ್ ಬಣದತ್ತ ಒಲವು ತೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.