ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ವರ್ಷದಲ್ಲಿ ಲಭಿಸಿದ ಉಡುಗೊರೆಗಳ ಪ್ರದರ್ಶನ ಹಾಗೂ ಇ– ಹರಾಜು ಪ್ರಕ್ರಿಯೆಗೆ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ನಮಾಮಿ ಗಂಗೆ ಯೋಜನೆಗೆ ಧನ ಸಂಗ್ರಹಕ್ಕಾಗಿ ಉಡುಗೊರೆಗಳನ್ನು ಹರಾಜಿಗೆ ಇರಿಸಲಾಗಿದೆ.
ಶಾಲು, ಜಾಕೆಟ್, ಪೇಟಗಳು ಸೇರಿದಂತೆ 2,700 ಕ್ಕೂ ಅಧಿಕ ಸ್ಮರಣಿಕೆಗಳನ್ನು ಇಲ್ಲಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಪ್ರದರ್ಶನಕ್ಕಿರಿಸಿದ್ದು, ಇವುಗಳ ಹರಾಜು ಅಕ್ಟೋಬರ್ 3ರ ವರೆಗೆ www.pmmementos.gov.in ವೆಬ್‌ಸೈಟ್ ಮೂಲಕ ನಡೆಯಲಿದೆ.
‘ಕನಿಷ್ಠ ₹200 ಹಾಗೂ ಗರಿಷ್ಠ ₹2.5ಲಕ್ಷ ಬೆಲೆಯ ಸ್ಮರಣಿಕೆಗಳನ್ನು ಹರಾಜು ಮಾಡಲಾಗುತ್ತಿದೆ‘ ಎಂದು ಸಚಿವ ಪ್ರಹ್ಲಾದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.