ADVERTISEMENT

‘ಬಾಲಕಿಯರಿಗೆ ಮೊಬೈಲ್‌ ನೀಡಿದರೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ’: ಮೀನಾ ಕುಮಾರಿ

ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 14:19 IST
Last Updated 10 ಜೂನ್ 2021, 14:19 IST
.
.   

ಲಖನೌ: ‘ಬಾಲಕಿಯರಿಗೆ ಮೊಬೈಲ್‌ ನೀಡಿದರೆ ಅತ್ಯಾಚಾರಕ್ಕೆ ಕಾರಣವಾಗುತ್ತದೆ. ಹೀಗಾಗಿ, ಮೊಬೈಲ್‌ ನೀಡಬೇಡಿ’ ಎಂದು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ಮೀನಾ ಕುಮಾರಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬೇಷರತ್‌ ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

‘ನಮ್ಮ ಹೆಣ್ಣುಮಕ್ಕಳ ಮೇಲೆ ನಿಗಾವಹಿಸಬೇಕು. ಅವರು ಎಲ್ಲಿಗೆ ಹೋಗುತ್ತಾರೆ. ಯಾರ ಜತೆ ಸಮಯ ಕಳೆಯುತ್ತಾರೆ. ಬಾಲಕಿಯರು ಮೊಬೈಲ್‌ನಲ್ಲೇ ಬಾಲಕರ ಜತೆ ಸ್ನೇಹ ಬೆಳೆಸುತ್ತಾರೆ. ಬಳಿಕ, ಹುಡುಗನ ಜತೆ ಓಡಿಹೋಗುತ್ತಾರೆ. ಸಮಾಜ ಅಥವಾ ಪೊಲೀಸರಿಂದ ಒತ್ತಡಗಳು ಹೆಚ್ಚಾದಾಗ ಅವರು ಮದುವೆಯಾಗುತ್ತಾರೆ’ ಎಂದು ಮೀನಾ ಕುಮಾರಿ ಅವರು ಹೇಳಿಕೆ ನೀಡಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಹೆಚ್ಚುತ್ತಿರುವ ಅತ್ಯಾಚಾರಗಳಿಗೆ ತಾಯಂದಿರೇ ಹೊಣೆಯಾಗಿದ್ದಾರೆ. ಹೆಣ್ಣುಮಕ್ಕಳ ಚಟುವಟಿಕೆಗಳ ಬಗ್ಗೆ ಗಮನಹರಿಸದಿರುವುದರಿಂದ ಇಂತಹ ಕೃತ್ಯಗಳು ನಡೆಯುತ್ತವೆ’ ಎಂದು ಹೇಳಿದ್ದಾರೆ.

ADVERTISEMENT

ಮೀನಾಕುಮಾರಿ ಒಬ್ಬ ಮಹಿಳೆಯಾಗಿ ಇಂತಹ ಹೇಳಿಕೆ ನೀಡಿರುವುದು ನಾಚಿಕೆಗೇಡಿತನದ್ದು ಎಂದು ಸಮಾಜವಾದಿ ಪಕ್ಷದ ನಾಯಕ ಅನುರಾಗ್‌ ಭದೌರಿಯಾ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.