ADVERTISEMENT

ಸೌರಕ್ಷೇತ್ರದಲ್ಲಿ ಜಾಗತಿಕ ಹೂಡಿಕೆ: ‌500 ಬಿಲಿಯನ್‌ ಡಾಲರ್‌ ಮುಟ್ಟುವ ನಿರೀಕ್ಷೆ

ಪಿಟಿಐ
Published 4 ನವೆಂಬರ್ 2024, 15:43 IST
Last Updated 4 ನವೆಂಬರ್ 2024, 15:43 IST
<div class="paragraphs"><p>ಪ್ರಲ್ಹಾದ&nbsp;ಜೋಶಿ</p></div>

ಪ್ರಲ್ಹಾದ ಜೋಶಿ

   

-ಪಿಟಿಐ ಚಿತ್ರ

ನವದೆಹಲಿ: ‘ಸೌರ ಇಂಧನ ತಯಾರಿಕಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಈ ವರ್ಷದ ಅಂತ್ಯದೊಳಗೆ ಹೂಡಿಕೆಯ ಪ‍್ರಮಾಣವು ₹42 ಲಕ್ಷ ಕೋಟಿಗೆ (500 ಬಿಲಿಯನ್‌ ಡಾಲರ್‌) ಮುಟ್ಟುವ ನಿರೀಕ್ಷೆಯಿದೆ. 2023ರಲ್ಲಿ ಹೂಡಿಕೆಯು ₹33 ಲಕ್ಷ ಕೋಟಿಗೆ (393 ಬಿಲಿಯನ್‌ ಡಾಲರ್‌) ತಲುಪಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ADVERTISEMENT

ನವದೆ‌ಹಲಿಯಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಸೌರ ಒಕ್ಕೂಟದ 7ನೇ ಸಾಮಾನ್ಯ ಅಧಿವೇಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು.

‘ಹೆಚ್ಚುತ್ತಿರುವ ಹೂಡಿಕೆಯಿಂದ ನವೀಕೃತ ಇಂಧನ ಶಕ್ತಿಯ ತಯಾರಿಕಾ ಪ್ರಮಾಣವು ಏರಿಕೆಯಾಗಿದ್ದು,  ಜಾಗತಿಕವಾಗಿ ಉತ್ಪಾದನೆ ವೆಚ್ಚದಲ್ಲಿ ಇಳಿಕೆ‌ಯಾಗಿದೆ. ಕಲ್ಲಿದ್ದಲು ಹಾಗೂ ಅನಿಲ ಆಧಾರಿತ ಇಂಧನಕ್ಕೆ ಹೋಲಿಸಿದರೆ ನವೀಕರಿಸಬಹುದಾದ ಇಂಧನ ಮೂಲವು ಅತ್ಯಂತ ಕಡಿಮೆ ವೆಚ್ಚದ್ದಾಗಿದೆ’ ಎಂದು ತಿಳಿಸಿದರು.

‘ಕಳೆದ ತಿಂಗಳ ಅಂತ್ಯಕ್ಕೆ ಭಾರತದಲ್ಲಿ 90 ಗಿಗಾವ್ಯಾಟ್‌ ಸೌರ ಇಂಧನ ಉತ್ಪಾದನೆಯಾಗಿದ್ದು, 2030ರ ವೇಳೆಗೆ 500 ಗಿಗಾವ್ಯಾಟ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. 37.5 ಗಿಗಾವ್ಯಾಟ್‌ ಸಾಮರ್ಥ್ಯದ 50 ಸೋಲಾರ್‌ ಪಾರ್ಕ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷ ಸ್ಥಾನ ಮುಂದುವರಿಕೆ: 2024ರಿಂದ 2026ರ ಅವಧಿಗೆ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಭಾರತವು ಆಯ್ಕೆಯಾಗಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದರು.

‘ಫ್ರಾನ್ಸ್ ದೇಶವು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದೆ. ಉಳಿದ ಸ್ಥಾಯಿ ಸಮಿತಿಗಳಿಗೆ 8 ರಾಷ್ಟ್ರಗಳು ಉಪಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದು, ಭೌಗೋಳಿಕ ಪ‍್ರದೇಶಕ್ಕೆ ಅನುಗುಣವಾಗಿ ತಲಾ ಎರಡು ದೇಶಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.