ನವದೆಹಲಿ:ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರುದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಂಡಿಗೊ ಎ320 ನಿಯೊ ವಿಮಾನದ ಮುಂದಿನ ಚಕ್ರಕ್ಕೆಡಿಕ್ಕಿ ಹೊಡೆಯುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ನಿಲ್ದಾಣದ ಎರಡನೇ ಟರ್ಮಿನಲ್‌ನ ಸ್ಟ್ಯಾಂಡ್ ಸಂಖ್ಯೆ 201ರಲ್ಲಿ ನಡೆದ ಈ ಘಟನೆಯ ಬಗ್ಗೆನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. ಯಾರೊಬ್ಬರೂ ಗಾಯಗೊಂಡಿಲ್ಲ’ ಎಂದು ವಿಮಾನಯಾನ ಉದ್ಯಮದ ಮೂಲಗಳು ಹೇಳಿವೆ.
‘ಮಂಗಳವಾರ ಬೆಳಿಗ್ಗೆ ಪಟ್ನಾಗೆ ಹೊರಡಲು ಸಜ್ಜಾಗಿದ್ದ ವಿಮಾನದ ಕೆಳಗೆ ಕಾರು ನುಗ್ಗಿದ್ದು, ವಿಮಾನ ಮುಂಭಾಗದ ಚಕ್ರಕ್ಕೆ ಡಿಕ್ಕಿಯಾಗುವುದು ಕೊಂಚದರಲ್ಲಿ ತಪ್ಪಿತು. ವಿಮಾನದ ನಿಗದಿತ ಸಂಚಾರ ಸಮಯಕ್ಕೆ ಯಾವುದೇ ಅಡಚಣೆಯಾಗಲಿಲ್ಲ’ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಗೋ ಫಸ್ಟ್ ಮತ್ತುಇಂಡಿಗೊ ವಿಮಾನಯಾನ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.