ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ:
ಪಕ್ಷ | ಮುನ್ನಡೆ | ಗೆಲುವು | 2017ರಲ್ಲಿ |
ಬಿಜೆಪಿ | 00 | 20 | 13 |
ಕಾಂಗ್ರೆಸ್ | 00 | 11 | 17 |
ಎಎಪಿ | 00 | 02 | 00 |
00 | 00 | ||
ಇತರರು | 00 | 07 | 10 |
ಒಟ್ಟು | 40 | 00 | 40 |
*****
ಗೋವಾದಲ್ಲಿ ಬಿಜೆಪಿಗೆ 20, ಕಾಂಗ್ರೆಸ್‌ಗೆ 11 ಸ್ಥಾನಗಳಲ್ಲಿ ಗೆಲುವು
ಗೋವಾದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತವೆನಿಸಿದೆ.
****
ಗೋವಾ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ
****
ಗೋವಾದಲ್ಲಿ ಬಿಜೆಪಿಗೆ ಮೂವರು ಪಕ್ಷೇತರರ ಬೆಂಬಲ
ಮೂವರು ಪಕ್ಷೇತರ ಶಾಸಕರು ನಮಗೆ ಪತ್ರದ ಮೂಲಕ ಬೆಂಬಲ ಸೂಚಿಸಿದ್ದು, ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ: ಬಿಜೆಪಿ ಗೋವಾ ಘಟಕ ಅಧ್ಯಕ್ಷ ಸದಾನಂದ ಶೇಟ್ ತನವಾಡೆ
***
ಗೋವಾ: 20 ಸ್ಥಾನಗಳಲ್ಲಿ ಬಿಜೆಪಿ ಗೆಲುವು
***
ಗೋವಾದಲ್ಲಿ ಮುಂದಿನ ಸಿಎಂ ಯಾರು?
ಪ್ರಮೋದ್ ಸಾವಂತ್ ಗೋವಾ ಸಿಎಂ ಆಗಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಬಿಜೆಪಿ ನಾಯಕ ವಿಶ್ವಜಿತ್ ರಾಣೆ, ನನಗೆ ಗೊತ್ತಿಲ್ಲ, ಇದು ಅತ್ಯಂತ ಸೂಕ್ಷ್ಮವಾದ ಪ್ರಶ್ನೆ ಎಂದು ಉತ್ತರಿಸಿದ್ದಾರೆ.
****
ಬಿಜೆಪಿಗೆ ಮೂವರು ಪಕ್ಷೇತರರ ಬೆಂಬಲ: ಗೋವಾ ಸಿಎಂ
ಈ ಗೆಲುವು ಅತ್ಯಂತ ಸವಾಲಿನಿಂದ ಕೂಡಿತ್ತು. ರಾಜ್ಯದೆಲ್ಲೆಡೆ ಪ್ರಚಾರ ನಡೆಸುತ್ತಿದ್ದರಿಂದ ಸ್ವಂತ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ನನ್ನ ಕಾರ್ಯಕರ್ತರು ನನ್ನ ಪರವಾಗಿ ಪ್ರಚಾರ ಮಾಡಿದರು. ನಾನು ಅಲ್ಪ ಅಂತರದಲ್ಲಿ ಗೆಲುವು ದಾಖಲಿಸಿದ್ದೇನೆ. ಆದರೆ ಬಿಜೆಪಿಗೆ ಬಹುಮತ ಖಚಿತವಾಗಿದೆ. ಮೂವರು ಪಕ್ಷೇತರರು ಬೆಂಬಲ ದೃಢಪಡಿಸಿದ್ದಾರೆ. - ಗೋವಾ ಸಿಎಂ ಪ್ರಮೋದ್ ಸಾವಂತ್
****
ನಾವೇ ಸರ್ಕಾರ ರಚಿಸುತ್ತೇವೆ: ಬಿಜೆಪಿ
ಮಧ್ಯಾಹ್ನ(2 ಗಂಟೆ)ದವರೆಗಿನ ಟ್ರೆ'ಡ್ ಪ್ರಕಾರ, ಗೋವಾದ 1 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದು, ನಾವೇ ಸರ್ಕಾರ ರಚಿಸುತ್ತೇವೆ ಎಮದು ಗೋವಾ ಬಿಜೆಪಿ ಹೇಳಿದೆ. ಸಂಜೆ ರಾಜ್ಯಪಾಲರನ್ನು ಭೆಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ತಿಳಿಸಿದೆ.
40 ಸದಸ್ಯಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 21 ಸ್ಥಾನಗಳ ಅಗತ್ಯವಿದ್ದು, ಪಕ್ಷೇತರರ ಬೆಂಬಲ ಪಡೆಯವುದಾಗಿ ಅದು ಹೇಳಿದೆ.
ಪಣಜಿ ಕ್ಷೇತ್ರದಲ್ಲಿ ಸೋಲನುಭವಿಸಿದ ಉತ್ಪಲ್ ಪರ್ರಿಕರ್
ಪಣಜಿ: ಗೋವಾದ ಪಣಜಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಿಎಂ ಮನೋಹರ್ ಪರ್ರಿಕರ್ ಅವರ ಪುತ್ರ ಉತ್ಪಲ್ ಪರ್ರಿಕರ್ ಸೋಲನುಭವಿಸಿದ್ದಾರೆ.
ಗೆಲುವಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇನೆ. ಉತ್ತಮ ಪೈಪೋಟಿ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಸೋಲಿನ ಬಳಿಕ ಮತ್ತೆ ಬಿಜೆಪಿಯತ್ತ ಮುಖ ಮಾಡುವಿರಾ? ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ಪಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಲ್ಲಿ ಬಿಜೆಪಿ ಅಭ್ಯರ್ಥಿ ಅಟನಾಸಿಯೊ ಬಾಬುಶ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
*ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಕೇಲಿಮ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಧರ್ಮೇಶ್ ಸಂಗ್ಲಾನಿ ಎದುರು ಹಿನ್ನಡೆ ಅನುಭವಿಸಿದ್ದಾರೆ.
* 2017ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ 10 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗೋವಾ ಕಾಂಗ್ರೆಸ್: ವರದಿ
* ಫಲಿತಾಂಶ ನಂತರದ ತುರ್ತು ಚಟುವಟಿಕೆ ದೃಷ್ಟಿಯಿಂದ ಕಾಂಗ್ರೆಸ್ ಈಗಾಗಲೇ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದೆ ಎಂದು ವರದಿಯಾಗಿದೆ.
* 2017ರಲ್ಲಿ ನಡೆದ ಶಾಸಕರ ಪಕ್ಷಾಂತರ ಆತಂಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲ ಅಭ್ಯರ್ಥಿಗಳನ್ನು ಪಣಜಿ ಬಳಿಯ ಬಂಬೋಲಿಮ್ ವಿಲೇಜ್‌ನ ಐಷಾರಾಮಿ ರೆಸಾರ್ಟ್‌ಗೆ ಶಿಫ್ಟ್ ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕರಿಗೆ ಉಸ್ತುವಾರಿ ನೀಡಲಾಗಿದೆ.
* ಗೋವಾ ಕಾಂಗ್ರೆಸ್ ನಾಯಕರು ಎಎಪಿ ಮತ್ತು ತೃಣಮೂಲ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದು, ಸರ್ಕಾರ ರಚಿಸುವ ಸಂದರ್ಭದಲ್ಲಿ ಬೆಂಬಲ ನೀಡುವಂತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.