ADVERTISEMENT

ಗೋವಾ ವಿಧಾನಸಭಾಧ್ಯಕ್ಷರಿಗೆ ಕೋವಿಡ್‌ ಸೋಂಕು, ಆಸ್ಪತ್ರೆಗೆ ದಾಖಲು

ಪಿಟಿಐ
Published 30 ಸೆಪ್ಟೆಂಬರ್ 2021, 7:36 IST
Last Updated 30 ಸೆಪ್ಟೆಂಬರ್ 2021, 7:36 IST
ರಾಜೇಶ್ ಪಟ್ನೇಕರ್
ರಾಜೇಶ್ ಪಟ್ನೇಕರ್   

ಪಣಜಿ: ಗೋವಾ ವಿಧಾನಸಭೆಯ ಸ್ಪೀಕರ್ ರಾಜೇಶ್ ಪಟ್ನೇಕರ್‌ ಅವರಿಗೆ ಕೋವಿಡ್‌–19 ಸೋಂಕು ತಗುಲಿರುವುದಾಗಿ ವಿಧಾನಸಭಾ ಕಾರ್ಯಾಲಯದ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಪಟ್ನೇಕರ್ ಅವರು ಬುಧವಾರ ಕೋವಿಡ್‌ ಪರೀಕ್ಷೆಗೆ ಒಳಗಾದರು. ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟ ನಂತರ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್‌) ಆಸ್ಪತ್ರೆಗೆ ದಾಖಲಾಗಿದ್ದಾರೆ‘ ಎಂದು ಮಾಜಿ ಶಾಸಕ ಮತ್ತು ಗೋವಾ ಜನಪ್ರತಿನಿಧಿಗಳ ವೇದಿಕೆಯ ಉಪಾಧ್ಯಕ್ಷ ವಿಕ್ಟರ್ ಗೊನ್ಸಾಲ್ವಿಸ್ ಸುದ್ದಿಗಾರರಿಗೆ ತಿಳಿಸಿದರು.

ಪಟ್ನೇಕರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಗೋನ್ಸಾಲ್ವಿಸ್‌ ಹೇಳಿದರು. ಪಟ್ನೇಕರ್ ಸೇರಿದಂತೆ ಕಳೆದ ಒಂದು ವಾರದಿಂದ ಮೂವರು ಬಿಜೆಪಿಯ ನಾಯಕರಿಗೆ ಕೋವಿಡ್‌ ಸೋಂಕು ತಗುಲಿದೆ. ಈ ವಾರದ ಆರಂಭದಲ್ಲಿ ಗೋವಾದ ಬಿಜೆಪಿ ಮುಖಂಡ ಸದಾನಂದ ತನ್ವಾಡೆ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಧೋಂಡ್‌ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಇವರಿಬ್ಬರೂ ಜಿಎಂಸಿಎಚ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.