ADVERTISEMENT

ಗೋವಾ ಬಿಜೆಪಿ ಹಳೆ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ್ ಜಿಂದಾಬಾದ್‌’ ಪೋಸ್ಟ್!

ವೆಬ್‌ಸೈಟ್ ಹ್ಯಾಕ್

ಪಿಟಿಐ
Published 15 ಅಕ್ಟೋಬರ್ 2018, 14:04 IST
Last Updated 15 ಅಕ್ಟೋಬರ್ 2018, 14:04 IST
   

ಪಣಜಿ: ಬಿಜೆಪಿಯ ಗೋವಾ ಘಟಕದ ಹಳೆಯ ವೆಬ್‌ಸೈಟ್‌ ಅನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ‘ಪಾಕಿಸ್ತಾನ್ ಜಿಂದಾಬಾದ್‌’ ಎಂಬ ಪೋಸ್ಟ್ ಹಾಕಿದ್ದಾರೆ ಎಂದು ಪಕ್ಷದ ಪದಾಧಿಕಾರಿಗಳು ತಿಳಿಸಿದ್ದಾರೆ.

‘ಟೀಮ್ ಪಿಸಿಇ’ ಎನ್ನುವ ಗ್ರೂಪ್ ಸೈಬರ್ ದಾಳಿ ಮಾಡಿರುವ ಸಾಧ್ಯತೆ ಇದ್ದು, ಹ್ಯಾಕ್ ಮಾಡಿದ ಸೈಟ್‌ನಲ್ಲಿ ಮೊಹಮ್ಮದ್ ಬಿಲಾಲ್ ಎಂಬ ವ್ಯಕ್ತಿ ಸಹ ಪೋಸ್ಟ್ ಮಾಡಿದ್ದಾನೆ.

ವೆಬ್‌ಸೈಟ್ ವಿರೂಪಗೊಳಿಸಿದ ಬಳಿಕ ‘mailto:catch.if.you.can@hotmail.com’ ಎಂಬ ಸಂದೇಶ ಹಾಕಲಾಗಿದೆ.

ADVERTISEMENT

‘ಹಳೇ ವೆಬ್‌ಸೈಟ್ ಇದಾಗಿದ್ದು, ಹೊಸ ವೆಬ್‌ಸೈಟ್‌ನಲ್ಲಿ ಆ್ಯಂಟಿ ಹ್ಯಾಕಿಂಗ್ ಭದ್ರತೆ ಅಳವಡಿಸಲಾಗಿದೆ. ಪಕ್ಷದಿಂದ ಈವರೆಗೆ ಪೊಲೀಸರಿಗೆ ದೂರು ನೀಡಿಲ್ಲ’ ಎಂದು ಪಕ್ಷದ ಐ.ಟಿ ಕೋಶದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸೈಬರ್ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಬಿಜೆಪಿ ಗೋವಾ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ತಾನಾವಡೆ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.