ADVERTISEMENT

ಗೋವಾ: ಕಾಂಗ್ರೆಸ್‌ ಮುಖಂಡನಿಗೆ ನೋಟಿಸ್‌

ಪಿಟಿಐ
Published 19 ಮಾರ್ಚ್ 2022, 21:52 IST
Last Updated 19 ಮಾರ್ಚ್ 2022, 21:52 IST

ಪಣಜಿ: ಗೋವಾ ಕಾಂಗ್ರೆಸ್‌ ಮುಖಂಡ ವಿಜಯ್‌ ಭಿಕೆ ಅವರಿಗೆ ಪಕ್ಷ ಶೋಕಾಸ್‌ ನೋಟಿಸ್‌ ನೀಡಿದೆ. ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಮಿತ್ರಪಕ್ಷವಾದ ಗೋವಾ ಫಾರ್ವರ್ಡ್‌ ಪಕ್ಷವೇ (ಜಿಎಫ್‌ಪಿ) ಕಾರಣ ಎಂದು ಅವರು ಶುಕ್ರವಾರ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ.

‘ಜಿಎಫ್‌ಪಿ ಜೊತೆ ಕೈಜೋಡಿಸಿದ್ದು ನಮ್ಮ ತಪ್ಪು ನಿರ್ಧಾರ. ಈ ಮೈತ್ರಿಕೂಟದಿಂದ ಕಾಂಗ್ರೆಸ್‌ಗೆ ಯಾವುದೇ ಅನುಕೂಲ ಆಗಲಿಲ್ಲ. ಬದಲಾಗಿ ಬೇರೆ ಪಕ್ಷಗಳು ಅದರ ಲಾಭವನ್ನು ಪಡೆದವು’ ಎಂದು ಭಿಕೆ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT