ಪಣಜಿ: ಗೋವಾದ ಕಡಲತೀರಗಳಲ್ಲಿ ಇರುವ ಗುಡಿಸಲು ಮಾದರಿಯ ಹೋಟೆಲ್‌ಗಳಲ್ಲಿ ಇನ್ನು ಮುಂದೆ ಗೋವಾದ ಸ್ಥಳೀಯ ತಿನಿಸಾಗಿರುವ ‘ಫಿಶ್ ಕರಿ–ರೈಸ್’ ಕಡ್ಡಾಯವಾಗಿ ಸಿಗಲಿದೆ. ಹೋಟೆಲ್ ನಡೆಸುವವರಿಗೆ ಈ ಸಂಬಂಧ ಸೂಚನೆಯನ್ನು ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಿನ್ನ ಘಮಲು ಮತ್ತು ಮಸಾಲೆಯ ‘ಫಿಶ್ ಕರಿ –ರೈಸ್’ ತನ್ನ ರುಚಿಯಿಂದಾಗಿ ಗಮನಸೆಳೆಯಲಿದೆ. ಇನ್ನು ಮುಂದೆ ಇದು ಹೋಟೆಲ್‌ಗಳಲ್ಲಿ ಮೆನುವಿನ ಭಾಗವಾಗಿರಬೇಕು. ಈ ತಿನಿಸು ಲಭ್ಯವಿರುವ ಕುರಿತು ಹೋಟೆಲ್‌ನ ಹೊರಗೂ ಮಾಹಿತಿ ಪ್ರಕಟಿಸಬೇಕು ಎಂದು ಸರ್ಕಾರ ಸೂಚಿಸಿದೆ.
‘ಈವರೆಗೆ ಗೋವಾದ ಈ ತಿನಿಸು ಬೀಚ್ ಬದಿಯ ಹೋಟೆಲ್‌ಗಳಲ್ಲಿ ಲಭ್ಯವಿರಲಿಲ್ಲ. ಕೇವಲ ಉತ್ತರ ಭಾರತದ ತಿನಿಸುಗಳಷ್ಟೇ ಪ್ರಮುಖವಾಗಿ ಲಭ್ಯವಿರುತ್ತಿದ್ದವು. ಸ್ಥಳೀಯ ತಿನಿಸು, ಆಹಾರ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಯಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಭಾನುವಾರ ತಿಳಿಸಿದರು.
ಬೀಚ್ ಬದಿಯ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಬೀಚ್‌ಗಳಲ್ಲಿ ಹಲವು ನಿಯಮಬಾಹಿರವಾಗಿ ವ್ಯಾಪಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಂಥ ಚಟುವಟಿಕೆಯಿಂದ ರಾಜ್ಯ ಪ್ರವಾಸೋದ್ಯಮಕ್ಕೆ ಧಕ್ಕೆ ಆಗಬಾರದು. ಹೀಗಾಗಿ, ಕಾರ್ಮಿಕರ ಪಟ್ಟಿ ನೀಡುವಂತೆಯೂ ಹೋಟೆಲ್‌ಗಳವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.