ADVERTISEMENT

ತೇಜ್‌ಪಾಲ್‌ ಅತ್ಯಾಚಾರ ಪ್ರಕರಣ: ಗೋವಾ ಸರ್ಕಾರದಿಂದ ಮೇಲ್ಮನವಿ

ಪಿಟಿಐ
Published 1 ಜೂನ್ 2021, 10:08 IST
Last Updated 1 ಜೂನ್ 2021, 10:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ತರುಣ್ ತೇಜ್‌ಪಾಲ್ ಅವನ್ನು ಖುಲಾಸೆಗೊಳಿಸಿರುವುದರ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಗೋವಾ ಸರ್ಕಾರ ಹೇಳಿದ್ದು, ಸೆಷನ್ಸ್‌ ನ್ಯಾಯಾಲಯದ ಗ್ರಹಿಕೆಯನ್ನೇ ತನ್ನ ಮೇಲ್ಮನವಿಯ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡಿದೆ.

ಬಾಂಬೆ ಹೈಕೋರ್ಟ್‌ನ ಗೋವಾ ಪೀಠಕ್ಕೆ ಸಲ್ಲಿಸಲಾಗಿರುವ ಈ ಮೇಲ್ಮನವಿಗೆ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಸೆಷನ್ಸ್‌ ನ್ಯಾಯಾಲಯವು ತಪ್ಪೊಪ್ಪಿಗೆಯ ಇಮೇಲ್ ಸಂದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಇದು ಯಾವುದೇ ಸಂಶಯ ಇಲ್ಲದ ರೀತಿಯಲ್ಲಿ ಆರೋಪಿಯ ತಪ್ಪನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದೆ.

‘ವಿಚಾರಣಾ ನ್ಯಾಯಾಲಯವು ಆರೋಪಿ ಪರ ನೀಡಲಾದ ಸಾಕ್ಷ್ಯಗಳನ್ನು ಸತ್ಯವೆಂದು ಪರಿಗಣಿಸಿದೆ. ಆದರೆ ಸಂತ್ರಸ್ತೆಯ ಪುರಾವೆಗಳನ್ನು ಪರಿಗಣಿಸಿಲ್ಲ‘ ಎಂದು ಸರ್ಕಾರ ಹೇಳಿದೆ. ಬುಧವಾರ ಈ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.