ADVERTISEMENT

ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಆದ್ಯತೆ: ಸಿಎಂ ಪ್ರಮೋದ್‌ ಸಾವಂತ್‌

ಗೋವಾ ಸರ್ಕಾರದಿಂದ ಕಾನೂನು ತಿದ್ದುಪಡಿ

ಪಿಟಿಐ
Published 26 ಜುಲೈ 2024, 16:40 IST
Last Updated 26 ಜುಲೈ 2024, 16:40 IST
ಪ್ರಮೋದ್‌ ಸಾವಂತ್‌– ಪ್ರಜಾವಾಣಿ ಚಿತ್ರ
ಪ್ರಮೋದ್‌ ಸಾವಂತ್‌– ಪ್ರಜಾವಾಣಿ ಚಿತ್ರ   

ಪಣಜಿ: ‘ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಖಚಿತಪಡಿಸಿಕೊಳ್ಳಲು ‘ರಾಜ್ಯ ಉದ್ಯೋಗ ವಿನಿಮಯ ಕಾಯ್ದೆ’ಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಶುಕ್ರವಾರ ವಿಧಾನಸಭೆಯಲ್ಲಿ‌ ತಿಳಿಸಿದರು.

‘ಈಗಿನ ಪರಿಸ್ಥಿತಿಯಲ್ಲಿ ಸ್ಥಳೀ‌ಯರಿಗೆ ಉದ್ಯೋಗ ನೀಡಬೇಕು ಎಂದು ಬಲವಂತ ಮಾಡಲು ಸಾಧ್ಯವಿಲ್ಲ. ಉದ್ಯೋಗ ವಿನಿಮಯ ಕೇಂದ್ರವು ನೇಮಕಾತಿ ವೇಳೆ ಖಾಸಗಿ ಸಂಸ್ಥೆಗಳಿಗೆ ಸ್ಥಳೀಯರಿಗೆ ಆದ್ಯತೆ ನೀಡುತ್ತದೆ. ನೇಮಕಾತಿ ವೇಳೆ ಅಭ್ಯ‌ರ್ಥಿಯ ಕೌಶಲ, ವಿದ್ಯಾರ್ಹತೆ ಹಾಗೂ ನಡವಳಿಕೆಯನ್ನು ಆಧರಿಸಿರುತ್ತದೆ’ ಎಂದು ತಿಳಿಸಿದರು.

‘ಕೈಗಾರಿಕೆಗಳ ವಿಶ್ವಾಸಕ್ಕೆ ಪಡೆದ ನಂತರ 10 ಹಾಗೂ ಅದಕ್ಕಿಂತ ಹೆಚ್ಚಿನ ನೇಮಕಾತಿ ವೇಳೆ ಸ್ಥಳೀಯರಿಗೆ ಆದ್ಯತೆ ನೀಡುವ  ‘ರಾಜ್ಯ ಉದ್ಯೋಗ ವಿನಿಮಯ ಕಾಯ್ದೆ’–1959 ತಿದ್ದುಪಡಿ ತರಲಾಗುವುದು. ಈ ಹಿಂದೆ 25ಕ್ಕಿಂತಲೂ ಹೆಚ್ಚಿನ ನೇಮಕಾತಿ ವೇಳೆ ಆದ್ಯತೆ ನೀಡಬೇಕು ಎಂದು ಕಾನೂನು ತಿದ್ದುಪಡಿ ತರಲು ನಿರ್ಧರಿಸಲಾಗಿತ್ತು’ ಎಂದು ಸಾವಂತ್‌ ಸ್ಪಷ್ಟಪಡಿಸಿದರು.

ADVERTISEMENT

‘ಕಾಯ್ದೆಗೆ ತಿದ್ದುಪಡಿ ಬಂದರೆ, ಯುವಕರಿಗೆ ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗ ಪಡೆಯಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.