ಪಣಜಿ, ಗೋವಾ (ಪಿಟಿಐ): ತಮ್ಮ ಸಹೋದ್ಯೋಗಿಯೊಬ್ಬರಿಗೆ ಕೋವಿಡ್ ದೃಢಪಟ್ಟಿದೆ ಎಂದು ಇಲ್ಲಿಯ ವಕೀಲರೊಬ್ಬರು ತಿಳಿಸಿದ ನಂತರ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ತರುಣ್ ತೇಜ್‌ಪಾಲ್ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 13 ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಮತ್ತು ಎಂ.ಎಸ್.ಜವಾಲ್ಕರ್ ಅವರ ವಿಭಾಗೀಯ ಪೀಠಕ್ಕೆ ತರುಣ್ ತೇಜಪಾಲ್ ಪರ ವಕೀಲ ರೌನತ್ ಅವರು, ಹಿರಿಯ ವಕೀಲ ಅಮಿತ್ ದೇಸಾಯಿ ಅವರಿಗೆ ಕೋವಿಡ್ ದೃಢಪಟ್ಟಿದೆ. ಆದ್ದರಿಂದ ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು. ನಂತರ ಪೀಠ ವಕೀಲರ ಮನವಿಯನ್ನು ಮನ್ನಿಸಿ ವಿಚಾರಣೆ ಮುಂದೂಡಿತು.
ತೆಹಲ್ಕಾ ವಾರಪತ್ರಿಕೆಯ ಮಾಜಿ ಸಂಪಾದಕ ತೇಜ್‌ಪಾಲ್, 2013ರ ನವೆಂಬರ್‌ನಲ್ಲಿ ಗೋವಾದಲ್ಲಿನ ಪಂಚತಾರಾ ಹೋಟೆಲ್‌ವೊಂದರ ಲಿಫ್ಟ್‌ನಲ್ಲಿ ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿತ್ತು. ಈ ವರ್ಷದ ಮೇನಲ್ಲಿ ಸೆಷನ್ಸ್ ನ್ಯಾಯಾಲಯವೊಂದು ತೇಜ್‌ಪಾಲ್ ಅವರನ್ನು ಆರೋಪದಿಂದ ಖುಲಾಸೆಗೊಳಿಸಿತ್ತು.ಇದನ್ನು ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.