ಪಣಜಿ: ರಷ್ಯಾ ಮಹಿಳೆಯೊಬ್ಬರು ₹16 ಲಕ್ಷ ಮೌಲ್ಯದ ಗಾಂಜಾ ಹಾಗೂ ಮಾದಕದ್ರವ್ಯ ಹೊಂದಿರುವುದನ್ನು ಪತ್ತೆ ಮಾಡಿರುವ ಪೊಲೀಸರು, ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮಹಿಳೆಯನ್ನು ಮಾಸ್ಕೊ ಮೂಲದ ಅಲ್ಲಾ ರುಸಾವಾ ಎಂದು ಗುರುತಿಸಲಾಗಿದೆ. ಇವರು ಗೋವಾದ ಉತ್ತರ ಭಾಗದಲ್ಲಿರುವ ಕ್ಲಬ್ ಒಂದರಲ್ಲಿ ಡಿಜೆ ಆಗಿ ಕೆಲಸ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ರುಸಾವಾ ಬಾಡಿಗೆಗೆ ಇದ್ದ ಮನೆ ಮೇಲೆ ಮಾದಕ ದ್ರವ್ಯ ವಿರೋಧ ಕೋಶದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದರು. 36.16 ಗ್ರಾಂ ಗಾಂಜಾ ಹಾಗೂ 337 ಗ್ರಾಂ ಮಾದಕ ದ್ರವ್ಯ ಹಾಗೂ ಮದ್ಯ ಸೇರಿದಂತೆ ಒಟ್ಟು ₹16.8 ಲಕ್ಷ ಮೌಲ್ಯದ ನಿಷೇಧಿತ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.