ಪಣಜಿ: 2024 ರ ಜನವರಿ 8 ರಿಂದ 13 ರವರೆಗೆ ವಿಶೇಷ ಚೇತನ ವ್ಯಕ್ತಿಗಳ ಪಾಲ್ಗೊಳ್ಳುವಿಕೆ ಮತ್ತು ಸಬಲೀಕರಣವನ್ನು ಆಚರಿಸುವ ಸಲುವಾಗಿ ಅಂತರರಾಷ್ಟ್ರೀಯ ನೇರಳೆ ಉತ್ಸವವನ್ನು (ಪರ್ಪಲ್ ಫೆಸ್ಟ್) ಗೋವಾ ರಾಜ್ಯ ಆಯೋಜಿಸಿದೆ.
ಸೋಮವಾರ ಪಣಜಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ವಿಷಯವನ್ನು ಘೋಷಿಸಿ, ಕಾರ್ಯಕ್ರಮ ಸಿದ್ದತೆಗಳ ಕುರಿತು ಮಾತನಾಡಿದ್ದಾರೆ.
ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣವು ದಾನ ಧರ್ಮ ಮಾಡುವ ಕಾರ್ಯವಲ್ಲ. ಆದರೆ, ಮಾನವ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಯನ್ನು ಉಳಿಸುವ ವಿಷಯವಾಗಿದೆ ಎಂದರು
ಜನರ ಬೆಂಬಲ ಹಾಗೂ ಒಳಗೊಳ್ಳುವಿಕೆಯು ಈ ಸಮುದಾಯದ ಸುಧಾರಣೆಗೆ ಕೊಡುಗೆ ನೀಡಬಲ್ಲದು, ಈ ಮೂಲಕ ಅಸಂಖ್ಯಾತ ವ್ಯಕ್ತಿಗಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ನಾವು ನೋಡಬಹುದು ಎಂದು ಮುಖ್ಯಮಂತ್ರಿ ಹೇಳಿದರು,
ಜನವರಿ 8 ರಿಂದ 13 ರವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಜನರನ್ನು ಆಹ್ವಾನಿಸುತ್ತೇನೆ. ಈಗಾಗಲೇ ಗೋವಾ ರಾಜ್ಯವು ಜಿ 20 ಸಭೆಗಳು ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಗೋವಾ ರಾಜ್ಯ ಸಮಾಜ ಕಲ್ಯಾಣ ಸಚಿವ ಸುಭಾಷ್ ದೇಸಾಯಿ ಇದ್ದರು. ಕಾರ್ಯಕ್ರಮದ ರೂಪುರೇಷೆಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.