ADVERTISEMENT

US Election | ಮಹದುದ್ದೇಶಕ್ಕಾಗಿ ದೇವರು ಬದುಕುಳಿಸಿದ್ದಾರೆ: ಟ್ರಂಪ್‌ ಧನ್ಯವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2024, 9:50 IST
Last Updated 6 ನವೆಂಬರ್ 2024, 9:50 IST
<div class="paragraphs"><p>ಅಮೆರಿಕದ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್‌ನಲ್ಲಿರುವ&nbsp;ಸಮ್ಮೇಳನ ಸಭಾಂಗಣದಲ್ಲಿ ಪತ್ನಿ ಮೆಲೇನಿಯಾ ಜತೆ ಡೊನಾಲ್ಡ್ ಟ್ರಂಪ್‌ ಸಂಭ್ರಮ</p></div>

ಅಮೆರಿಕದ ಫ್ಲೋರಿಡಾದಲ್ಲಿರುವ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಪತ್ನಿ ಮೆಲೇನಿಯಾ ಜತೆ ಡೊನಾಲ್ಡ್ ಟ್ರಂಪ್‌ ಸಂಭ್ರಮ

   

ರಾಯಿಟರ್ಸ್ ಚಿತ್ರ

ಫ್ಲೋರಿಡಾ: ‘ಮಹದುದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್‌ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

ADVERTISEMENT

ಫ್ಲೊರಿಡಾದ ವೆಸ್ಟ್‌ ಪಾಮ್‌ ಬೀಚ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ‘ಅಭೂತಪೂರ್ವ ಹಾಗೂ ಸಂಪೂರ್ಣ ಬೆಂಬಲವನ್ನು ಅಮೆರಿಕ ನೀಡಿದೆ’ ಎಂದಿದ್ದಾರೆ.

‘ಅಮೆರಿಕನ್ನರ ಪಾಲಿಗೆ ಇದೊಂದು ಅಭೂತಪೂರ್ವ ವಿಜಯ. ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ಈ ಗೆಲುವು ಸಹಕಾರಿಯಾಗಿದೆ. ನನ್ನನ್ನು ದೇವರು ಬದುಕುಳಿಸಿದ್ದು ಈ ದೇಶವನ್ನು ರಕ್ಷಿಸಲು ಹಾಗೂ ಅಮೆರಿಕದ ಹಿರಿಮೆಯನ್ನು ಕಾಪಾಡುವ ಸಲುವಾಗಿ’ ಎಂದು ಹೇಳಿದ ಟ್ರಂಪ್‌, ತಮ್ಮ ಮೇಲೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ಎರಡು ಗುಂಡಿನ ದಾಳಿಯನ್ನು ಪರೋಕ್ಷವಾಗಿ ನೆನಪಿಸಿಕೊಂಡರು.

‘ರಾಜಕೀಯ ವಲಯದಲ್ಲಿ ಇದೊಂದು ಯಾರೂ ನಿರೀಕ್ಷಿಸದ ವಿದ್ಯಮಾನ. ಇದನ್ನು ಯಾರೂ ಊಹಿಸಿರಲಿಲ್ಲ. ನಮ್ಮ ದೇಶದ ಸದ್ಯದ ಪರಿಸ್ಥಿತಿಯನ್ನು ಸರಿಪಡಿಸಲು ಇದು ನೆರವಾಗಲಿದೆ. ನಮ್ಮ ಗಡಿಯನ್ನು ಭದ್ರಪಡಿಸಲಾಗುವುದು. ನಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲವನ್ನೂ ಸರಿಪಡಿಸಲಾಗುವುದು’ ಎಂದಿದ್ದಾರೆ.

‘ನೀವು, ನಿಮ್ಮ ಕುಟುಂಬ ಹಾಗೂ ನಿಮ್ಮ ಭವಿಷ್ಯದ ಪ್ರತಿಯೊಂದು ದಿನವೂ ಸುರಕ್ಷಿತವಾಗಿಡಲು ನಾನು ಹೋರಾಡುತ್ತೇನೆ. ಅಮೆರಿಕದ ಮಕ್ಕಳು ಹಾಗೂ ಪ್ರತಿಯೊಬ್ಬರೂ ಅದ್ಭುತ ಜೀವನ ನಡೆಸಲು ಅಗತ್ಯವಿರುವುದನ್ನು ಸ್ಥಾಪಿಸದ ಹೊರತೂ ನಾನು ವಿರಮಿಸುವುದಿಲ್ಲ’ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.