ADVERTISEMENT

ಮತ್ತೊಂದು ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಅಪರಾಧಿ

ಪಿಟಿಐ
Published 30 ಜನವರಿ 2023, 15:21 IST
Last Updated 30 ಜನವರಿ 2023, 15:21 IST
ಅಸಾರಾಂ ಬಾಪು
ಅಸಾರಾಂ ಬಾಪು   

ಗಾಂಧಿನಗರ: ಶಿಷ್ಯೆಯೊಬ್ಬರ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಗುಜರಾತ್‌ನ ಸೆಷೆನ್ಸ್‌ ನ್ಯಾಯಾಲಯವು ಸೋಮವಾರ ಅಪರಾಧಿ ಎಂದು ತೀರ್ಪು ನೀಡಿದೆ.

ಸೆಷೆನ್ಸ್‌ ನ್ಯಾಯಾಧೀಶ ಡಿ.ಕೆ. ಸೋನಿ ಅವರು ಜ.31ಕ್ಕೆ ಶಿಕ್ಷೆಯ ಪ್ರಮಾಣ ಘೋಷಿಸುವುದಾಗಿ ಹೇಳಿದರು. 2013ರ ಈ ಪ್ರಕರಣದಲ್ಲಿ ಅಸಾರಾಂ ಬಾ‍ಪುವಿನ ಪತ್ನಿ ಸೇರಿ ಪ್ರಕರಣದ ಆರೋಪಿಗಳಾಗಿದ್ದ ಆರು ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಪೂರಕ ಸಾಕ್ಷ್ಯಾಧಾರ ಇಲ್ಲದ ಕಾರಣ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ ಎಂದು ಕೋರ್ಟ್‌ ಹೇಳಿದೆ.

‘ಐಪಿಸಿ ಸೆಕ್ಷನ್‌ 376 2(ಸಿ) (ಅತ್ಯಾಚಾರ), 377 (ಅಸಹಜ ಅಪರಾಧಗಳು) ಸೇರಿದಂತೆ ಅಕ್ರಮ ಬಂಧನ ಸಂಬಂಧ ಇರುವ ಸೆಕ್ಷನ್‌ಗಳ ಅನ್ವಯ ಶಿಕ್ಷೆ ವಿಧಿಸಲಾಗಿದೆ’ ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್‌.ಸಿ. ಕೊಡೇಕರ್‌ ಅವರು ಸೋಮವಾರ ಹೇಳಿದರು.

ADVERTISEMENT

2001ರಿಂದ 2006ರ ವರೆಗೆ ಬೇರೆ ಬೇರೆ ಸಂದರ್ಭಗಳಲ್ಲಿ ತನ್ನ ಶಿಷ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆಯಲ್ಲಿ ಮಹಿಳೆಯು ಅಸಾರಾಂ ಬಾಪು ಆಶ್ರಮದಲ್ಲಿ ಇದ್ದರು. ಅಹಮದಾಬಾದ್‌ನ ಛಂದ್‌ಖೇಡಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಪ್ರಕರಣವೊಂದರಲ್ಲಿ ಅಸಾರಾಂ ಬಾಪು ಈಗಾಗಲೇ ಜೋಧಪುರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.