ADVERTISEMENT

ಗುಡ್‌ ಫ್ರೈಡೇ: ಯೇಸು ಕ್ರಿಸ್ತನ ಧೈರ್ಯ, ತ್ಯಾಗವನ್ನು ಸ್ಮರಿಸಿದ ಪ್ರಧಾನಿ ಮೋದಿ

ಪಿಟಿಐ
Published 15 ಏಪ್ರಿಲ್ 2022, 6:52 IST
Last Updated 15 ಏಪ್ರಿಲ್ 2022, 6:52 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕ್ರೈಸ್ತರ ಪವಿತ್ರ ದಿನ ಗುಡ್‌ ಫ್ರೈಡೇ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದರು.

ಯೇಸುವನ್ನು ಕಲ್ವಾರಿ ಬೆಟ್ಟದಲ್ಲಿ ಶಿಲುಬೆಗೇರಿಸಿದ ದಿನವನ್ನು ಗುಡ್‌ ಫ್ರೈಡೇ ಅಥವಾ ಶುಭ ಶುಕ್ರವಾರ ಎಂದು ವಿಶ್ವದಾದ್ಯಂತ ನೆಲೆಸಿರುವ ಕ್ರಿಶ್ಚಿಯನ್ನರು ಆಚರಿಸುತ್ತಾರೆ.

'ಗುಡ್‌‌ ಫ್ರೈಡೇಯ ಈ ದಿನದಂದು ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ನಾವು ಸ್ಮರಿಸುತ್ತಿದ್ದೇವೆ. ಯೇಸುವಿನ ಸೇವೆ ಮತ್ತು ಭ್ರಾತೃತ್ವದ ವಿಚಾರಗಳು ಜನರ ಬದುಕಿಗೆ ದಾರಿದೀಪವಾಗಿದೆ' ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಶುಭ ಶುಕ್ರವಾರ 2022 | ಶಿಲುಬೆ: ಸೋಲಿನ ಪಾಡೋ ಜಯದ ಹಾಡೋ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.