ADVERTISEMENT

ಹಳಿ ತಪ್ಪಿದ ಗೂಡ್ಸ್‌ ರೈಲು: 39 ರೈಲುಗಳ ಸಂಚಾರ ರದ್ದು

ಪಿಟಿಐ
Published 13 ನವೆಂಬರ್ 2024, 14:49 IST
Last Updated 13 ನವೆಂಬರ್ 2024, 14:49 IST
<div class="paragraphs"><p>ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಗೂಡ್ಸ್‌ ರೈಲಿ ಹಳಿ ತಪ್ಪಿದ ನಂತರ ಹಳಿಗಳ ಪುನಃಸ್ಥಾಪನೆ ಕಾರ್ಯ ನಡೆಯಿತು </p></div>

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಗೂಡ್ಸ್‌ ರೈಲಿ ಹಳಿ ತಪ್ಪಿದ ನಂತರ ಹಳಿಗಳ ಪುನಃಸ್ಥಾಪನೆ ಕಾರ್ಯ ನಡೆಯಿತು

   

–ಪಿಟಿಐ ಚಿತ್ರ

ಹೈದರಾಬಾದ್‌: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ, 39 ಪ್ರಯಾಣಿಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಕೇಂದ್ರ ರೈಲ್ವೆಯ (ಎಸ್‌ಸಿಆರ್‌) ಅಧಿಕಾರಿಗಳು ಬುಧವಾರ ತಿಳಿಸಿದರು.

ADVERTISEMENT

ಕಬ್ಬಿಣದ ಸರಳುಗಳನ್ನು ಸಾಗಿಸುತ್ತಿದ್ದ  ಗೂಡ್ಸ್‌ ರೈಲಿನ 12 ಬೋಗಿಗಳು ರಾಘವಪುರಂ ಮತ್ತು ರಾಮಗುಂಡಂ ನಡುವೆ ಮಂಗಳವಾರ ರಾತ್ರಿ ಹಳಿ ತಪ್ಪಿವೆ. ಇದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಎಸ್‌ಸಿಆರ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಧರ್‌ ತಿಳಿಸಿದರು.

ರೈಲು ಕರ್ನಾಟಕದ ಬಳ್ಳಾರಿಯಿಂದ ಗಾಜಿಯಾಬಾದ್‌ನತ್ತ ಸಾಗುತ್ತಿತ್ತು. ರೈಲು ಸಾಗುತ್ತಿದ್ದ ಮಾರ್ಗದ ಹಳಿಗಳಿಗೆ ಹಾನಿಯಾದ ಪರಿಣಾಮ ಈ ಘಟನೆ ಸಂಭವಿಸಿದ್ದು, ಹಳಿಗಳ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದರು.

ಗೂಡ್ಸ್‌ ರೈಲು ಹಳಿ ತಪ್ಪಿದ ಕಾರಣ 39 ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ, 7 ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ ಮತ್ತು 61 ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.