ಬೆಂಗಳೂರು: ವಿಶ್ವಸಂಸ್ಥೆಯ ಕಾಂಬ್ಯಾಟ್ ಡಿಸರ್ಟಿಫಿಕೇಷನ್ ಸಮಾವೇಶದ (ಯುಎನ್‌ಸಿಸಿಡಿ) ಜಾಗತಿಕ ಸದ್ಭಾವನಾ ರಾಯಭಾರಿಯಾಗಿ ಡಾ.ರಿಕಿ ಕೇಜ್ ಅವರು ನೇಮಕಗೊಂಡಿದ್ದಾರೆ.
ಯುಎನ್‌ಸಿಸಿಡಿಯ ಮುಖ್ಯಸ್ಥ ಇಬ್ರಾಹಿಂ ಥಿಯಾವ್ ಅವರು ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ಇವರ ನೇಮಕವನ್ನು ಪ್ರಕಟಿಸಿದರು. ಪರಿಸರ ರಕ್ಷಣೆ, ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ.
ರಿಕಿ ಕೇಜ್ ಅವರು ನಾಲ್ಕು ವರ್ಷಗಳಿಂದ ಯುಎನ್‌ಸಿಸಿಡಿ ಜೊತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ #HerLand campaign ಅಭಿಯಾನ ಆರಂಭಿಸಿದ್ದಾರೆ. ಇದು, ಮಹಿಳೆ ಭೂ ಹಕ್ಕು ಹೊಂದುವಲ್ಲಿ ಅಗತ್ಯ ಬೆಂಬಲ ಕ್ರೋಢೀಕರಿಸಲಿದೆ ಎಂದು ಆಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.