ADVERTISEMENT

ಬಾಬಾ ಆಮ್ಟೆಗೆ ಗೂಗಲ್‌ ಡೂಡಲ್‌ ಗೌರವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 10:40 IST
Last Updated 26 ಡಿಸೆಂಬರ್ 2018, 10:40 IST
ಬಾಬಾ ಆಮ್ಟೆ
ಬಾಬಾ ಆಮ್ಟೆ   
ನವದೆಹಲಿ: ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ 104ನೇ ಜನ್ಮದಿನದಕ್ಕೆಬುಧವಾರ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

ಮುರಳೀಧರ ದೇವದಾಸ್‌ ಆಮ್ಟೆ(ಬಾಬಾ ಆಮ್ಟೆ) 1914ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು. ತಮ್ಮ ಜೀವನವನ್ನು ಕುಷ್ಠ ರೋಗಿಗಳು, ಅಂಗವಿಕಲರು, ಹಿಂದುಳಿದ ಸಮುದಾಯದವರ ಸೇವೆಗೆ ಮುಡಿಪಾಗಿಟ್ಟಿದ್ದರು.

1949ರಲ್ಲಿ ಕುಷ್ಠರೋಗಿಗಳ ಪುನರ್ವಸತಿಗಾಗಿ ‘ಆನಂದವನ’ ಎಂಬ ಆಶ್ರಮ ಸ್ಥಾಪಿಸಿದರು.

ADVERTISEMENT

ಇವರ ಸಾಮಾಜಿಕ ಕಳಕಳಿಗೆ ಪದ್ಮಶ್ರೀ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ, ಗಾಂಧಿ ಶಾಂತಿ ಪ್ರಶಸ್ತಿಗಳು ಅರಸಿ ಬಂದಿವೆ.

ದೇಶದಲ್ಲಿ ಏಕತೆಯ ಅರಿವು ಮೂಡಿಸಲು ತಮ್ಮ 72ನೇ ವಯಸ್ಸಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಯಾತ್ರೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.