ನವದೆಹಲಿ: 75 ನೇ ಗಣರಾಜ್ಯೋತ್ಸಕ್ಕೆ ವಿಶೇಷ ಡೂಡಲ್ ಮೂಲಕ ಗೂಗಲ್ ಶುಭ ಕೋರಿದೆ. ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಹಂಚಿಕೊಂಡಿದೆ.
ಕಾಲ ಕಳೆದಂತೆ ಕಪ್ಪು–ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್ ಬರೆದುಕೊಂಡಿದೆ.
‘ಈ ಡೂಡಲ್ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ’ ಎನ್ನುವ ಮಾಹಿತಿಯನ್ನು ಡೂಡಲ್‌ನಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.