ADVERTISEMENT

ಬಾಹ್ಯಾಕಾಶ ಯಾನ ಸಂತಸ ತಂದಿದೆ: ಗೋಪಿ ಥೋಟಾಕುರ 

​ಪ್ರಜಾವಾಣಿ ವಾರ್ತೆ
Published 20 ಮೇ 2024, 13:59 IST
Last Updated 20 ಮೇ 2024, 13:59 IST
<div class="paragraphs"><p>ಭಾರತದ ಉದ್ಯಮಿ ಗೋಪಿ ಥೋಟಾಕುರ ಅವರು ಬ್ಲ್ಯೂ ಆರಿಜಿನ್‌ನ ಖಾಸಗಿ ಬಾಹ್ಯಾಕಾಶ ಪ್ರವಾಸಕ್ಕೆ ಸಜ್ಜಾದ ಉಳಿದ ಸದಸ್ಯರ ಜೊತೆಗೆ </p></div>

ಭಾರತದ ಉದ್ಯಮಿ ಗೋಪಿ ಥೋಟಾಕುರ ಅವರು ಬ್ಲ್ಯೂ ಆರಿಜಿನ್‌ನ ಖಾಸಗಿ ಬಾಹ್ಯಾಕಾಶ ಪ್ರವಾಸಕ್ಕೆ ಸಜ್ಜಾದ ಉಳಿದ ಸದಸ್ಯರ ಜೊತೆಗೆ

   

–ಪಿಟಿಐ ಚಿತ್ರ

ಹ್ಯೂಸ್ಟನ್ : ‘ಭಾರತದ ಮೊದಲ ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆ ಪಡೆದಿರುವುದು ಸಂತಸ ತಂದಿದೆ ಎಂದು ಉದ್ಯಮಿ, ಪೈಲಟ್‌ ಗೋಪಿ ಥೋಟಾಕುರ ತಿಳಿಸಿದರು.

ADVERTISEMENT

ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಝೋ ಅವರ ‘ಬ್ಲ್ಯೂ ಆರಿಜಿನ್‌ನ ಎನ್‌ಎಸ್‌–25’ ಬಾಹ್ಯಾಕಾಶ ಯಾನಕ್ಕೆ ತೆರಳಿದ ಆರು ಸದಸ್ಯರಲ್ಲಿ ಥೋಟಾಕುರ ಸಹ ಒಬ್ಬರು.

‘ಬ್ಲ್ಯೂ ಆರಿಜಿನ್‌ನ ಎನ್‌ಎಸ್‌–25’ರ ಏಳನೇ ಬಾಹ್ಯಾಕಾಶ ವಿಮಾನವನ್ನು ಪಶ್ಚಿಮ ಟೆಕ್ಸಾಸ್‌ನ ಉಡ್ಡಯನ ಪ್ರದೇಶದಿಂದ ಭಾನುವಾರ ಉಡಾವಣೆ ಮಾಡಲಾಗಿದ್ದು, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ಬ್ಲ್ಯೂ ಆರಿಜಿನ್‌ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಥೋಟಾಕುರ ಅವರು, ‘ಭಾರತ ಬಾಹ್ಯಾಕಾಶಕ್ಕೆ ತೆರಳುತ್ತಿದೆ’ ಎಂದು ಹೇಳಿದ್ದಾರೆ. ಅವರು ಭಾರತದ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದಿರುವ ದೃಶ್ಯವೂ ಇದೆ.

ಭಾರತ ಸೇನೆಯ ವಿಂಗ್‌ ಕಮಾಂಡರ್‌ ಆಗಿದ್ದ ರಾಕೇಶ್ ಶರ್ಮ ಅವರು 1984ರಲ್ಲಿ ಬಾಹ್ಯಾಕಾಶ ಯಾನವನ್ನು ಕೈಗೊಂಡ ಮೊದಲಿಗರೆನಿಸಿಕೊಂಡಿದ್ದರು. ಆದರೆ, ಥೋಟಾಕುರ ಅವರು ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಗೋಪಿ ಥೋಟಾಕುರ ಅವರು ಆಂಧ್ರಪ್ರದೇಶದವರು. ಎಂಬ್ರೆ ರಿಡ್ಡಲ್‌ ಏರೋನಾಟಿಕಲ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ‘ಪ್ರಿಸರ್ವ್‌ ಲೈಫ್‌ ಕಾರ್ಪ್‌’ ಎಂಬ ಸಮಗ್ರ ಸ್ವಾಸ್ಥ್ಯ ಮತ್ತು ಅನ್ವಯಿಕ ಆರೋಗ್ಯ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.