ಜಲಗಾಂವ್: ಮಹಾರಾಷ್ಟ್ರದಲ್ಲಿ ರೈತರು, ಮಹಿಳೆಯರು ಮತ್ತು ಯುವಜನರ ಸ್ಥಿತಿ ಸುಧಾರಣೆಗೆ ‘ಸರ್ಕಾರ ಬದಲಾ ವಣೆಯ ಅಗತ್ಯವಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಪೈರೋಲ್‌ನಲ್ಲಿ ಮಹಾ ವಿಕಾಸ್ ಆಘಾಡಿ ಅಭ್ಯರ್ಥಿಗಳ ಪರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಬದ್ಲಾಪುರದಲ್ಲಿ ಶಾಲೆಗೆ ತೆರಳುವ ಬಾಲಕಿ ಮೇಲೆ ದೌರ್ಜನ್ಯ ನಡೆಯಿತು. ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಇಂಥ ಎಷ್ಟು ಉದಾಹರಣೆಗಳನ್ನು ಕೊಡಬೇಕು? ಮಹಿಳೆಯರಿಗೆ ರಕ್ಷಣೆ ನೀಡುವ ಬದಲಾಗಿ ಅವರು ನಮ್ಮ ಸಹೋದರಿಯರಿಗೆ ಹಣ ನೀಡುತ್ತೇವೆ ಎಂದು ಘೋಷಿಸುತ್ತಾರೆ (ಲಡಕೀ ಬಹೀಣ)’ ಎಂದು ಟೀಕಿಸಿದರು.
‘ಲಡಕೀ ಬಹೀಣ ಯೋಜನೆಗೆ ನಾವು ವಿರೋಧ ವ್ಯಕ್ತಪಡಿಸು ತ್ತಿಲ್ಲ. ನೀವು ಹಣ ಕೊಡಿ ಆದರೆ ನಮ್ಮ ಸಹೋದರಿಯರ ಸ್ಥಿತಿ ಹೇಗಿದೆ? ಕೇಂದ್ರ ಸರ್ಕಾರ ಹಂಚಿಕೊಂಡ ಅಂಕಿಅಂಶದ ಪ್ರಕಾರ 9,000 ಬಾಲಕಿಯರು ನಾಪತ್ತೆಯಾಗಿದ್ದಾರೆ’ ಎಂದು ಹೇಳಿದರು.
‘ಸರ್ಕಾರ ಬದಲಾಗದ ಹೊರತು ನಿಮ್ಮ ಸ್ಥಿತಿ ಬದಲಾಗುವುದಿಲ್ಲ. ಅದಕ್ಕಾಗಿ ನಾವು (ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್ ಬಣ), ಶಿವಸೇನೆ (ಉದ್ಧವ್ ಬಣ) ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.