ಜೈಪುರ:ದೀಪಿಕಾ ಪಡುಕೋಣೆ ನಟನೆಯ ಛಪಾಕ್ ಚಿತ್ರಕ್ಕೆ ರಾಜಸ್ತಾನ ಸರ್ಕಾರ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆಸಿಡ್ ದಾಳಿಗೆ ತುತ್ತಾಗಿ, ಕಾನೂನು ಹೋರಾಟದಲ್ಲಿ ಗೆದ್ದು, ಬದುಕು ಕಟ್ಟಿಕೊಂಡಿರುವ ಲಕ್ಷ್ಮೀ ಅಗರ್‌ವಾಲ್‌ಬದುಕಿನ ನೈಜ ಕಥೆ ಹೊಂದಿರುವ ಚಿತ್ರ ಇದಾಗಿದೆ.ಮೇಘನಾ ಗುಲ್ಜಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಜೆಎನ್‌ಯು ಭೇಟಿ ನಂತರ ದೀಪಿಕಾ ಪಡುಕೋಣೆ ಅವರ ಚಿತ್ರಕ್ಕೆ ದೇಶಾದ್ಯಂತ ಪರ–ವಿರೋಧಗಳು ಕೇಳಿಬಂದಿದ್ದವು. ಆ ಕಾರಣ, ಛಪಾಕ್ ಚಿತ್ರವು ಬಿಡುಗಡೆಗೂ ಮುನ್ನವೇ ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಛಪಾಕ್ ವಿಮರ್ಶೆ: ಮನಕಲಕುವ ‘ಸಿನಿಶಬ್ದ'
ಕಾಂಗ್ರೆಸ್ ನೇತೃತ್ವದ ರಾಜಸ್ತಾನ ಸರ್ಕಾರ ಛಪಾಕ್ ಚಿತ್ರಕ್ಕೆ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಆ ಮೂಲಕ ದೀಪಿಕಾ ಪಡುಕೋಣೆ ಅವರಿಗೆ ಬೆಂಬಲ ಸೂಚಿಸಿದೆ. ಕಾಂಗ್ರೆಸ್ ಆಡಳಿತ ಇರುವ ಮಧ್ಯ ಪ್ರದೇಶ ಮತ್ತು ಛತ್ತಿಸ್‌ಗಡ ರಾಜ್ಯಗಳಲ್ಲಿಯೂ ಛಪಾಕ್ ಚಿತ್ರ ತೆರಿಗೆ ಮುಕ್ತ ಪ್ರದರ್ಶನ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.