ಡೆಹ್ರಾಡೂನ್ (ಉತ್ತರಖಂಡ): ಮಹಾಮಾರಿ ಕೊರೊನಾ ಸೋಂಕಿಗೆ ತಲ್ಲಣಗೊಂಡಿರುವ ಉತ್ತರಾಖಂಡ ಸರ್ಕಾರ ಬುಧವಾರ ಸರ್ಕಾರಿ ನೌಕರರಿಗೆ 'ವರ್ಕ್ ಫ್ರಂ ಹೋಮ್'ಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಈ ಆದೇಶ ಮಾರ್ಚ್ 19 ರಿಂದ 24ರವರೆಗೆ ಅನ್ವಯಸಲಿದೆ.ಉತ್ತರಾಖಂಡ ಸರ್ಕಾರ ದೇಶದಲ್ಲಿ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಆದೇಶಿಸಿರುವ ಮೊದಲ ರಾಜ್ಯವಾಗಿದೆ. ಈ ಆದೇಶ ಆರೋಗ್ಯ, ಪೊಲೀಸ್, ಸಾರಿಗೆ ಮತ್ತು ನೀರು ಸರಬರಾಜು ಹಾಗೂಒಳಚರಂಡಿ ಇಲಾಖೆ, ವಿದ್ಯುಚ್ಚಕ್ತಿ ಇಲಾಖೆಗಳಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಲಾಗಿದೆ.
ಬುಧವಾರದವರೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 151ಕ್ಕೆ ಏರಿವೆ. ಇವರಲ್ಲಿ 25 ಮಂದಿ ವಿದೇಶಿಯರೂ ಸೇರಿದ್ದಾರೆ. ಇದರಿಂದಾಗಿ ಉತ್ತರಾಖಂಡ ಸರ್ಕಾರಿಕಚೇರಿಗಳಿಗೆ ನೌಕರರು ಹಾಗೂ ಸಾರ್ವಜನಿಕರ ಪ್ರವೇಶವನ್ನು ಮಾರ್ಚ್ 19 ರಿಂದ 24ರವರೆಗೆ ನಿರ್ಬಂಧಿಸಲಾಗಿದೆ. ಅಗತ್ಯ ಇರುವ ನೌಕರರನ್ನು ಮಾತ್ರ ಕಚೇರಿಗೆ ಕರೆಸಿಕೊಳ್ಳಲಾಗುವುದು. ಉಳಿದವರುಮನೆಯಿಂದಲೇ ಕಚೇರಿಯ ಕೆಲಸ ಮಾಡಬೇಕುಎಂದು ತಿಳಿಸಿದೆ.
ಉತ್ತರಾಖಂಡ ಪೊಲೀಸ್ ಇಲಾಖೆಯ ವಿಪತ್ತು ನಿರ್ವಹಣಾ ತಂಡಗಳು ಸೋಂಕಿನ ಕುರಿತು ಜನರಲ್ಲಿರುವ ತಪ್ಪುತಿಳುವಳಿಕೆಯನ್ನು ಹೋಗಲಾಡಿಸಲು ಶ್ರಮ ವಹಿಸುತ್ತಿವೆ.ಈ ತಂಡಗಳು ಸ್ವಚ್ಛತೆ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ರೋಗ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರಿಗೆ ತಿಳುವಳಿಕೆ ನೀಡಲುಶ್ರಮಿಸುತ್ತಿವೆ.
ಶಮರಮತಿ ಮೆಡಿಕಲ್ ಆಸ್ಪತ್ರೆ ಮತ್ತು ಕೆಲಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಕೋವಿಡ್ -19 ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿದ್ದು, ಇದು ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.ರಾಜ್ಯಪಾಲರು ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.