ADVERTISEMENT

ಕೊರೊನಾ ಭೀತಿ: ಸಿಎಎ, ಎನ್‌ಪಿಆರ್ 3 ತಿಂಗಳು ಮುಂದೂಡಿ ಎಂದ ಸಲ್ಮಾನ್ ಖುರ್ಷಿದ್

ಏಜೆನ್ಸೀಸ್
Published 21 ಮಾರ್ಚ್ 2020, 2:39 IST
Last Updated 21 ಮಾರ್ಚ್ 2020, 2:39 IST
   

ನವದೆಹಲಿ: ಕೊರೊನಾವೈರಸ್‌ (ಕೊವಿಡ್‌–19) ಸೋಂಕು ಭೀತಿ ಹಿನ್ನೆಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಂತಹ (ಎನ್‌ಪಿಆರ್‌) ಯೋಜನೆಗಳನ್ನು 3 ತಿಂಗಳ ಮಟ್ಟಿಗೆ ಮುಂದೂಡಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವುದರಿಂದ ಕೊರೊನಾ ವೈರಸ್ ಹರಡುವಿಕೆ ಅಪಾಯವಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಭಟನೆ ಹಿಂಪಡೆಯುವಂತೆ ಪ್ರತಿಭಟನಾಕಾರರಲ್ಲಿ ಸರ್ಕಾರ ಮನವಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಪ್ರತಿಭಟನಾನಿರತರನ್ನು ಭೇಟಿ ಮಾಡಬೇಕು. ಈ ಭೀತಿಯಿಂದ (ಕೊರೊನಾ) ಹೊರಬರುವವರೆಗೆ ಎಲ್ಲ ಯೋಜನೆಗಳನ್ನೂ ಮುಂದೂಡಲಾಗುವುದೆಂದು ಅವರಿಗೆ ಭರವಸೆ ನೀಡಬೇಕು ಎಂದು ಬಯಸುವುದಾಗಿ ಖುರ್ಷಿದ್ ಹೇಳಿದ್ದಾರೆ.

ADVERTISEMENT

ಏಪ್ರಿಲ್ 2ರವರೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಖುರ್ಷಿದ್, ಪ್ರತಿಭಟನೆಗಳನ್ನೂ ಹಿಂಪಡೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.