ನವದೆಹಲಿ: ಸಂಸತ್ ಭವನದ ಆಧುನೀಕರಣ ಈಗ ಅವಶ್ಯಕತೆ ಇಲ್ಲ. ಆದರೆ, ದೂರದೃಷ್ಟಿವುಳ್ಳ ಕೇಂದ್ರ ಸರ್ಕಾರದ ಅಗತ್ಯ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದರು.
‘ಸೆಂಟ್ರಲ್ ವಿಸ್ತಾ ಅವಶ್ಯಕತೆ ಇಲ್ಲ. ದೂರದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರದ ಅಗತ್ಯ ಇದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೋವಿಡ್–19 ತೀವ್ರವಾಗಿ ಹರಡುತ್ತಿರುವುದಕ್ಕೆ ಸಂಬಂಧಿಸಿ ಮತ್ತೊಂದು ಟ್ವೀಟ್ ಮಾಡಿರುವ ಅವರು, ಸಾಮಾನ್ಯ ಜನರು ಪರಸ್ಪರರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.
‘ಇದೇ ರೀತಿ ಒಬ್ಬರಿಗೊಬ್ಬರು ಸಹಾಯ ಮಾಡುವುದನ್ನು ಮುಂದುವರಿಸಬೇಕು. ಆ ಮೂಲಕ ಈ ‘ಕುರುಡು ವ್ಯವಸ್ಥೆ’ಯನ್ನು ಜನರಿಗೆ ತೋರಿಸಬೇಕು’ ಎಂದೂ ಅವರು ಹಿಂದಿಯಲ್ಲಿ ಮಾಡಿರುವ ಟ್ವೀಟ್‌ನಲ್ಲಿ ಹೇಳಿದ್ದಾರೆ.
ದೇಶದಲ್ಲಿ ಬುಧವಾರ 3.60 ಲಕ್ಷ ಹೊಸದಾಗಿ ಕೋವಿಡ್ ಪ್ರಕರಣಗಳು ವರದಿಯಾಗಿವೆ. 3,293 ಜನ ರೋಗಿಗಳು ಮೃತಪಟ್ಟಿದ್ದು, ಸತ್ತವರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.