ADVERTISEMENT

‘ಸುಪ್ರೀಂ’ ಮುಖ್ಯನ್ಯಾಯಮೂರ್ತಿ ಬೊಬಡೆ ಉತ್ತರಾಧಿಕಾರಿ ಶಿಫಾರಸಿಗೆ ಕೇಂದ್ರ ಕೋರಿಕೆ

ಪಿಟಿಐ
Published 20 ಮಾರ್ಚ್ 2021, 11:18 IST
Last Updated 20 ಮಾರ್ಚ್ 2021, 11:18 IST
ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ
ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ   

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಅವರು ನಿವೃತ್ತಿಯಾಗಲು ಒಂದು ತಿಂಗಳು ಬಾಕಿ ಇರುವಾಗ ಮುಂದಿನ ಮುಖ್ಯ ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದ್ದು, ತಮ್ಮ ಉತ್ತರಾಧಿಕಾರಿಯ ಹೆಸರು ಶಿಫಾರಸು ಮಾಡುವಂತೆ ಅವರನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್‌ 23ರಂದು ನಿವೃತ್ತಿಯಾಗಲಿರುವ ಮುಖ್ಯನ್ಯಾಯಮೂರ್ತಿ ಬೊಬಡೆ ಅವರಿಗೆ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಶುಕ್ರವಾರ ಈ ಸಂಬಂಧ ಪತ್ರ ಬರೆದಿದ್ದು, ಮುಂದಿನ ಮುಖ್ಯನ್ಯಾಯಮೂರ್ತಿಯ ಹೆಸರು ಸೂಚಿಸಲು ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಹಿಂದಿನಿಂದಲೂ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಆಗುವ ಸಮಯದಲ್ಲಿ ಉನ್ನತ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ತಮ್ಮ ಮುಂದಿನ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡುವುದು ಸಂಪ್ರದಾಯ.

ADVERTISEMENT

ಸುಪ್ರೀಂಕೋರ್ಟ್‌ನಲ್ಲಿ ಮುಖ್ಯನ್ಯಾಯಮೂರ್ತಿಗಳ ನಂತರ ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಸ್ಥಾನದಲ್ಲಿ ಎನ್‌.ವಿ. ರಮಣ ಇದ್ದಾರೆ. 1957ರ ಆಗಸ್ಟ್‌ 27ರಂದು ಜನಿಸಿದ ರಮಣ ಅವರ ಸೇವಾವಧಿ 2022ರ ಆಗಸ್ಟ್‌ 22ರವರೆಗೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.