ADVERTISEMENT

4 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಶೀತ ನಿವಾರಕ ಔಷಧದ ಮಿಶ್ರಣ ನೀಡದಂತೆ ಸೂಚನೆ

ಪಿಟಿಐ
Published 21 ಡಿಸೆಂಬರ್ 2023, 3:15 IST
Last Updated 21 ಡಿಸೆಂಬರ್ 2023, 3:15 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೀತನಿವಾರಕ ನಿಗದಿತ ಪ್ರಮಾಣದ ಔಷಧದ ಮಿಶ್ರಣ (ಎಫ್‌ಡಿಸಿ) ನೀಡಬಾರದು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನಿರ್ದೇಶಿಸಿದೆ.

ಈ ಕುರಿತು ಔಷಧ ಉತ್ಪಾದನಾ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಕಚೇರಿ ನಿರ್ದೇಶಿಸಿದೆ.

ADVERTISEMENT

ಅಲ್ಲದೆ ಔಷಧಿಯಲ್ಲಿ ಕಡ್ಡಾಯವಾಗಿ 'ಎಚ್ಚರಿಕೆ'ಯ ಲೇಬಲ್ ಲಗತ್ತಿಸುವಂತೆ ಸೂಚಿಸಿದೆ.

ಭಾರತದ ಕಂಪನಿ ನಿರ್ಮಿತ ಕೆಮ್ಮಿನ ಸಿರಪ್ ಸೇವಿಸಿ ಜಾಗತಿಕವಾಗಿ 141ರಷ್ಟು ಮಕ್ಕಳು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಕ ಕಚೇರಿ ಕಠಿಣ ಕ್ರಮ ಕೈಗೊಂಡಿದೆ.

ಈ ಪೈಕಿ ಗಾಂಬಿಯಾ, ಉಜ್ಬೇಕಿಸ್ತಾನ ಹಾಗೂ ಕ್ಯಾಮರೂನ್ ದೇಶಗಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿತ್ತು. ಭಾರತದಲ್ಲೂ 12 ಮಕ್ಕಳು ಮೃತಪಟ್ಟಿದ್ದರು. ಇದರಿಂದಾಗಿ ಭಾರತದಿಂದ ರಫ್ತು ಆಗುತ್ತಿರುವ ಔಷಧಿ ಗುಣಮಟ್ಟದ ಮೇಲೆ ಶಂಕೆ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.