ADVERTISEMENT

ನಾಗಾಲ್ಯಾಂಡ್‌, ಅರುಣಾಚಲದಲ್ಲಿ ಕೆಲವೆಡೆ ‘ವಿಶೇಷಾಧಿಕಾರ ಕಾಯ್ದೆ’ ಮುಂದುವರಿಕೆ

ಪಿಟಿಐ
Published 26 ಸೆಪ್ಟೆಂಬರ್ 2024, 16:17 IST
Last Updated 26 ಸೆಪ್ಟೆಂಬರ್ 2024, 16:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಬಳಿಕ ನಾಗಾಲ್ಯಾಂಡ್‌ನ 8 ಜಿಲ್ಲೆಗಳು, ಅರುಣಾಚಲಪ್ರದೇಶದ 3 ಜಿಲ್ಲೆ ಸೇರಿದಂತೆ ವಿವಿಧೆಡೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಮತ್ತೆ ಆರು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯವು ಕ್ರಮ ಕೈಗೊಂಡಿದೆ.

ಈ ಜಿಲ್ಲೆಗಳನ್ನು ‘ಸಂಘರ್ಷಕ್ಕೆ ಒಳಗಾದ ಪ್ರದೇಶಗಳು’ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದು, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಅಡಿಯಲ್ಲಿ ಸೇನೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಅವಕಾಶ ಕಲ್ಪಿಸಲಿದೆ.

ADVERTISEMENT

ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಈ ಪ್ರದೇಶಗಳಲ್ಲಿ ಅಗತ್ಯಬಿದ್ದರೆ ಸೇನೆಯು ನೇರವಾಗಿ ಶೋಧ ಕಾರ್ಯಾಚರಣೆ, ಕಂಡಲ್ಲಿ ಗುಂಡು ಹಾರಿಸಲು ಕಾಯ್ದೆ ಅಡಿಯಲ್ಲಿ ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.