ADVERTISEMENT

ಆರ್ಥಿಕತೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲ: ಜೈರಾಮ್‌ ರಮೇಶ್‌

ಪಿಟಿಐ
Published 24 ಸೆಪ್ಟೆಂಬರ್ 2023, 15:30 IST
Last Updated 24 ಸೆಪ್ಟೆಂಬರ್ 2023, 15:30 IST
 ಜೈರಾಮ್ ರಮೇಶ್ – ಪ್ರಜಾವಾಣಿ ಚಿತ್ರ
 ಜೈರಾಮ್ ರಮೇಶ್ – ಪ್ರಜಾವಾಣಿ ಚಿತ್ರ   

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಿಲ್ಲ. ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಮಸ್ಯೆ ಪರಿಹರಿಸುವಲ್ಲಿ ಅಸಮರ್ಥವಾಗಿದೆ. ಬದಲಿಗೆ ಅಂಕಿ ಅಂಶಗಳನ್ನು ತಿರುಚುತ್ತಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ’ಸಂಸತ್ತಿನ ವಿಶೇಷ ಅಧಿವೇಶನ ಮುಗಿದಿದೆ. ಅದಾನಿ ಹಗರಣ, ಜಾತಿ ಗಣತಿ, ವಿಶೇಷವಾಗಿ ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆ ಮತ್ತು ಆರ್ಥಿಕ ಸಂಕಷ್ಟದಂತಹ ಕೆಲವು ನಿರ್ಣಾಯಕ ಸಮಸ್ಯೆಗಳಿಂದ ದೇಶವನ್ನು ಬೇರೆಡೆಗೆ ಸೆಳೆಯಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ‘ ಎಂದು ಹೇಳಿದ್ದಾರೆ.  

’ಕೇಂದ್ರ ಸರ್ಕಾರ ಎಷ್ಟೇ ಅಂಕಿ ಅಂಶಗಳನ್ನು ಮರೆಮಾಚಿದರೂ ಬಹುಪಾಲು ಜನರು ಸಂಕಷ್ಟಕ್ಕೆ ಸಿಲುಕಿರುವುದು ವಾಸ್ತವ. ಕಳೆದ ವಾರ ವರದಿಯಾದ ಕೆಲವು ಸಂಗತಿಗಳನ್ನು ಕಡೆಗಣಿಸಲು ಪ್ರಯತ್ನಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬುದು ಆರ್‌ಬಿಐನ ಇತ್ತೀಚಿನ ವರದಿ ತಿಳಿಸಿದೆ‘ ಎಂದು ಅವರು ವಿವರಿಸಿದ್ದಾರೆ. 

ADVERTISEMENT

’2021-22ರಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವೀಧರರಲ್ಲಿ ಶೇಕಡ 42ಕ್ಕೂ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದರು ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವರದಿ ಹೇಳುತ್ತದೆ. ಸಾಂಕ್ರಾಮಿಕ ರೋಗ ಪ್ರಾರಂಭವಾಗುವ ಮೊದಲು ಭಾರತವು ಈಗಾಗಲೇ 45 ವರ್ಷಗಳಲ್ಲಿ ಅತ್ಯಧಿಕ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ ಎಂಬುದನ್ನು ನೆನಪಿಡಬೇಕು. ಈ ಅಂಕಿ ಅಂಶವನ್ನು ಮೋದಿ ಸರ್ಕಾರ ಸಾರ್ವಜನಿಕ ವಲಯದಿಂದ ಮರೆಮಾಚಲು ಸಾಕಷ್ಟು ಶ್ರಮಿಸಿದೆ‘ ಎಂದು ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.