ನವದೆಹಲಿ: ಕೇಂದ್ರ ಸರ್ಕಾರವು 2014–15ರಿಂದ ಇದುವರೆಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ₹5,200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋಡ್ ಗುರುವಾರ ಹೇಳಿದ್ದಾರೆ.
2014–15ರಲ್ಲಿ ₹979 ಕೋಟಿ, 2015–16ರಲ್ಲಿ ₹1,160 ಕೋಟಿ, 2016–17ರಲ್ಲಿ ₹1,264 ಕೋಟಿ ಹಾಗೂ 2017 –18ರಲ್ಲಿ ₹ 1,313 ಕೋಟಿ, 2018–19ರಲ್ಲಿ ಡಿಸೆಂಬರ್ ವರೆಗೆ ₹527 ಕೋಟಿ ಹಣವನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಖರ್ಚು ಮಾಡಲಾಗಿದೆ ಎಂದು ಲೋಕಸಭೆಯಲ್ಲಿ ಅವರು ತಿಳಿಸಿದ್ದಾರೆ.
ಪ್ರವಾಹ: 85ಸಾವಿರ ಕೋಟಿ ನಷ್ಟ
2015 ರಿಂದ 17ರ ವರೆಗೆ 10 ಕೋಟಿ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದು, ₹85,673 ಕೋಟಿಯ ನಷ್ಟ ಸಂಭವಿಸಿದೆ ಎಂದು ಕೇಂದ್ರ ಜಲಸಂಪನ್ಮೂಲ ರಾಜ್ಯ ಸಚಿವ ಅರ್ಜುನ್ ರಾಮ್ ಮೆಗ್ವಾಲ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಪ್ರವಾಹದ ಕಾರಣ ಈ ಅವಧಿಯಲ್ಲಿ 4,902 ಜನರು ಮೃತಪಟ್ಟಿದ್ದಾರೆ. 82,146 ಜಾನುವಾರುಗಳು ಸಾವನ್ನಪ್ಪಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.