ADVERTISEMENT

ಉಡಾನ್‌: 392 ವಾಯುಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಬಿಡ್‌ ಆಹ್ವಾನ

ಪಿಟಿಐ
Published 14 ಮಾರ್ಚ್ 2021, 7:59 IST
Last Updated 14 ಮಾರ್ಚ್ 2021, 7:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಉಡಾನ್‌’ ಯೋಜನೆಯಡಿ 392 ವಾಯುಮಾರ್ಗಗಳಲ್ಲಿ ವಿಮಾನಗಳ ಹಾರಾಟಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಬಿಡ್‌ ಆಹ್ವಾನಿಸಿದೆ.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಂಗವಾಗಿ ಉಡಾನ್‌ 4.1 ಅಡಿ ಈ ಬಿಡ್‌ ಆಹ್ವಾನಿಸಲಾಗುತ್ತಿದೆ’ ಎಂದು ಸಚಿವಾಲಯ ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶೀಯವಾಗಿ ವಿಮಾನ ಸಂಪರ್ಕ ಜಾಲವನ್ನು ವಿಸ್ತರಿಸುವುದು ಹಾಗೂ ವಿಮಾನಯಾನ ಜನರಿಗೆ ಕೈಗೆಟುಕುವಂತಾಗಬೇಕು ಎಂಬ ಪ್ರಯತ್ನದ ಭಾಗವಾಗಿ ಸಚಿವಾಲಯ ಇಂಥ ಕ್ರಮಕ್ಕೆ ಮುಂದಾಗಿದೆ.

ADVERTISEMENT

‘ಆರು ವಾರಗಳೊಳಗೆ ಈ ಬಿಡ್ಡಿಂಗ್‌ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಉಡಾನ್‌ ಯೋಜನೆಯ ಈ ಹಿಂದಿನ ಆವೃತ್ತಿಗಳಲ್ಲಿ ಒಳಪಡದ ಆದ್ಯತೆಯ ವಾಯುಮಾರ್ಗಗಳನ್ನು ಈ ಬಾರಿಯ ಬಿಡ್ಡಿಂಗ್‌ನಲ್ಲಿ ಪರಿಗಣಿಸಲಾಗುತ್ತದೆ’ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಢೆ ತಿಳಿಸಿದ್ದಾರೆ.

ಉಡಾನ್‌ ಯೋಜನೆ ಆರಂಭವಾಗಿ ನಾಲ್ಕು ವರ್ಷಗಳಾಗಿದ್ದು, ಈ ಅವಧಿಯಲ್ಲಿ 325 ವಾಯುಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಲಾಗಿದೆ. 5 ಹೆಲಿಪೋರ್ಟ್‌ ಹಾಗೂ ಎರಡು ವಾಟರ್‌ಏರೋಡ್ರೋಮ್‌ ಸೇರಿದಂತೆ 56 ವಿಮಾನನಿಲ್ದಾಣಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.