ನವದೆಹಲಿ: ಭಾರತ ವಿರೋಧಿಪ್ರಚಾರ, ನಕಲಿ ಸುದ್ದಿಗಳನ್ನು ಹರಡುತ್ತಿರುವ ಆರೋಪದ ಮೇಲೆ 22 ಯೂಟ್ಯೂಬ್ ಸುದ್ದಿ ಚಾನೆಲ್‌ಗಳನ್ನು ನಿರ್ಬಂಧಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆದೇಶಿಸಿದೆ.
ಇವುಗಳಲ್ಲಿ 18 ಭಾರತೀಯ ಯೂಟ್ಯೂಬ್ ಸುದ್ದಿ ಚಾನೆಲ್‌ಗಳು ಹಾಗೂ ನಾಲ್ಕು ಪಾಕಿಸ್ತಾನಕ್ಕೆ ಸೇರಿದ್ದಾಗಿವೆ. ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳು– 2021 ರ ಅಧಿಸೂಚನೆಯ ನಂತರ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಸಚಿವಾಲಯ ತಿಳಿಸಿದೆ.
22 ಯೂಟ್ಯೂಬ್ ಚಾನೆಲ್‌ಗಳು, ಮೂರು ಟ್ವಿಟರ್ ಖಾತೆಗಳು, ಒಂದು ಫೇಸ್‌ಬುಕ್ ಖಾತೆ ಮತ್ತು ಒಂದು ಸುದ್ದಿ ವೆಬ್‌ಸೈಟ್ ಅನ್ನು ನಿರ್ಬಂಧಿಸಲು ಇಲಾಖೆ ಸೋಮವಾರ ಆದೇಶ ಹೊರಡಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಚಾನೆಲ್‌ಗಳು ಭಾರತಕ್ಕೆ ಸಂಬಂಧಿಸಿದ ವಿವಿಧ ಸೂಕ್ಷ್ಮ ವಿಷಯಗಳ ಬಗ್ಗೆ ನಕಲಿ ಸುದ್ದಿಗಳನ್ನು ಹರಡುತ್ತಿವೆ. ಕಾಶ್ಮೀರ, ಸೇನೆ ಮತ್ತಿತರ ವಿಷಯ ಕುರಿತು ತಪ್ಪು ಮಾಹಿತಿ ನೀಡುವ ಪೋಸ್ಟ್ ಮಾಡಲು ಚಾನೆಲ್‌ಗಳನ್ನು ಬಳಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.