ನವದೆಹಲಿ: ದೇಶದ ಮುಖ್ಯವಾಹಿನಿಯ ಟಿ.ವಿ. ಚಾನಲ್‌ಗಳು ಮತ್ತು ವೃತ್ತಪತ್ರಿಕೆಗಳ ಡಿಜಿಟಲ್ ಸುದ್ದಿ ಅಡಕಗಳಿಗೆ ‘ಐ.ಟಿ ನಿಯಮಗಳು 2021’ದಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ.
ಅಲ್ಲದೆ, ಡಿಜಿಟಲ್ ಮಾಧ್ಯಮ ನಿಯಮಗಳಿಗೆ ತಕ್ಷಣವೇ ಬದ್ಧರಾಗಲು ‘ತುರ್ತುಕ್ರಮ’ ಕೈಗೊಳ್ಳಬೇಕು ಎಂದೂ ಹೇಳಿದೆ.
‘ವಿವಿಧ ಮಾಧ್ಯಮ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಕಾನೂನು ವ್ಯಾಪ್ತಿಗೆ ತರುವುದು ಉತ್ತಮ ಸಕಾರಣದಿಂದಲೇ ಕೂಡಿದೆ’ ಎಂದು ಆನ್‌ಲೈನ್ ಪ್ರಸಾರ ಕುರಿತಂತೆ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದೆ.
ಡಿಜಿಟಲ್ ಸುದ್ದಿ ಪ್ರಕಾಶನ, ಆನ್‌ಲೈನ್ ಅಡಕಗಳು, ಒಟಿಟಿ ವೇದಿಕೆಗಳು, ಡಿಜಿಟಲ್ ಮಾಧ್ಯಮ ಪ್ರಕಾಶನಗಳಿಗೆ ಅನ್ವಯಿಸಿ ಸ್ಪಷ್ಟನೆ ನೀಡಲಾಗಿದೆ.
ಯಾವುದೇ ವಿನಾಯಿತಿ ನೀಡುವುದು, ಸಾಂಪ್ರದಾಯಿಕವಾದ ಟಿ.ವಿ ಮತ್ತು ಮುದ್ರಣ ಮಾಧ್ಯಮವನ್ನು ಹೊಂದಿಲ್ಲದ ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ತಾರತಮ್ಯ ಮಾಡಿದಂತಾಗಲಿದೆ ಎಂದು ಕೇಂದ್ರ ತಿಳಿಸಿದೆ.
ಸಾಂಪ್ರದಾಯಿಕ ಟಿ.ವಿ., ಮುದ್ರಣ ಮಾಧ್ಯಮಗಳಿಗೆ ನೂತನ ನಿಯಮದಿಂದ ವಿನಾಯಿತಿ ಕೋರಿ ರಾಷ್ಟ್ರೀಯ ಪ್ರಕಾಶಕರ ಸಂಸ್ಥೆ (ಎನ್‌ಬಿಎ) ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.