ADVERTISEMENT

ಸಿಐಎಸ್‌ಎಫ್‌ಗೆ 1,025 ಸಿಬ್ಬಂದಿಯ ಮಹಿಳಾ ಬೆಟಾಲಿಯನ್ ಮಂಜೂರು

ಪಿಟಿಐ
Published 12 ನವೆಂಬರ್ 2024, 16:26 IST
Last Updated 12 ನವೆಂಬರ್ 2024, 16:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್), ಇದೇ ಮೊದಲ ಬಾರಿಗೆ 1,025 ಸಿಬ್ಬಂದಿಯುಳ್ಳ ಮಹಿಳಾ ಬೆಟಾಲಿಯನ್ ಅನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.

ವಿಮಾನನಿಲ್ದಾಣಗಳು ಹಾಗೂ ಇತರೆ ಪ್ರಮುಖ ಸಂಸ್ಥೆಗಳ ಬಳಿ ಸಿಐಎಸ್‌ಎಫ್‌ನ ಕಾರ್ಯಭಾರ ಹೆಚ್ಚಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಹಾಲಿ ಇರುವ ಎರಡು ಲಕ್ಷ ಸಿಬ್ಬಂದಿಯಲ್ಲಿ ಆಯ್ಕೆ ಮಾಡಿ ಹೊಸದಾಗಿ ಮಂಜೂರಾದ ತುಕಡಿ ರಚಿಸಲಿದ್ದು, ಹಿರಿಯ ಕಮಾಂಡೆಂಟ್‌ ದರ್ಜೆಯ ಅಧಿಕಾರಿ ನೇತೃತ್ವ ವಹಿಸುವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಪ್ರಸ್ತುತ 12 ಮೀಸಲು ತುಕಡಿಗಳಿವೆ. 

68 ವಿವಿಧ ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೊ, ತಾಜ್‌ಮಹಲ್‌, ಕೆಂಪು ಕೋಟೆ ಸೇರಿದಂತೆ ಹಲವು ಐತಿಹಾಸಿಕ ಸಂಕೀರ್ಣಗಳ ಭದ್ರತಾ ಉಸ್ತುವಾರಿಯನ್ನು ಸಿಐಎಸ್‌ಎಫ್‌ ನಿಭಾಯಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.