ನವದೆಹಲಿ: ಕೋವಿಡ್ ಪೀಡಿತರಿಗಾಗಿ ಪಿ.ಎಂ.ಕೇರ್ಸ್ ನಿಧಿಯಡಿ ಮೊದಲ ಹಂತದಲ್ಲಿ ದೇಶಿಯವಾಗಿ ತಯಾರಿಸಿರುವ 1,340 ವೆಂಟಿಲೇಟರ್‌ಗಳನ್ನು ವಿವಿಧ ರಾಜ್ಯಗಳಿಗೆ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ ತಯಾರಿಸಿ ಕಾರ್ಯಕ್ರಮದ ಭಾಗವಾಗಿ 50 ಸಾವಿರ ವೆಂಟಿಲೇಟರ್‌ಗಳನ್ನು ತಯಾರಿಸಲು ನಿರ್ಧರಿಸಲಾಗಿದ್ದು, ಸದ್ಯ 2,923 ವೆಂಟಿಲೇಟರ್‌ಗಳನ್ನು ತಯಾರಿಸಲಾಗಿದೆ. ಈ ಪೈಕಿ 1,340 ಅನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ರಾಜ್ಯಕ್ಕೆ 90 ವೆಂಟಿಲೇಟರ್‌ಗಳು ದೊರೆತಿವೆ. ಈ ಯೋಜನೆಗಾಗಿ ಒಟ್ಟು ₹2000 ಕೋಟಿ ಹಣವನ್ನು ತೆಗೆದಿರಿಸಲಾಗಿದೆ.
ಈ ತಿಂಗಳ ಅಂತ್ಯದ ವೇಳೆಗೆ 14,000 ವೆಂಟಿಲೇಟರ್‌ಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುತ್ತದೆ. ಇನ್ನು ಪಿ.ಎ.ಕೇರ್ಸ್ ನಿಧಿಯಡಿ ₹1000 ಕೋಟಿಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದು, ಇದನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕಕ್ಕೆ ₹34 ಕೋಟಿ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.