ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮುಂದಿನ ಒಂದು ವಾರ ಬ್ಯಾಂಕುಗಳಿಗೆ ರಜಾ ಎಂಬ ಸುಳ್ಳು ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ.
ಹಬ್ಬದ ಪ್ರಯುಕ್ತ ಹಾಗೂ ಪ್ರತಿಭಟನೆಯ ಕಾರಣ ಸೆಪ್ಟೆಂಬರ್ ಮೊದಲ ವಾರದ ಅಂದರೆ ಸೆಪ್ಟೆಂಬರ್ 2ರಿಂದ 8ರವರೆಗೆ ಬ್ಯಾಂಕುಗಳು ಬಂದ್ ಆಗಲಿವೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಸುಳ್ಳು ಸುದ್ದಿಗೆ ಸ್ಪಷ್ಟನೆ ನೀಡಿದ ಹಣಕಾಸು ಸಚಿವಾಲಯ, ಮುಂದಿನ ವಾರ ಬ್ಯಾಂಕುಗಳಿಗೆ ಯಾವುದೇ ರಜಾ ಇರುವುದಿಲ್ಲ. ಎಂದಿನಂತೆ ಎಲ್ಲಾ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದೆ.
ಸೆ.2 ಭಾನುವಾರ, ಹಾಗೂ ಸೆ. 8 ಎರಡನೇ ಶನಿವಾರ. ಆದ ಕಾರಣ ಈ ಎರಡು ದಿನಗಳು ಮಾತ್ರ ಬ್ಯಾಂಕುಗಳಿಗೆ ರಜಾ ಇರುತ್ತದೆ. ಸೆ.3 ಶ್ರೀ ಕೃಷ್ಣ ಜನ್ಮಷ್ಟಾಮಿಗೆ ಸಾರ್ವಜನಿಕ ರಜಾ ಇರುವುದಿಲ್ಲ. ಕೆಲವು ರಾಜ್ಯಗಳು ಮಾತ್ರ ರಜಾ ಘೋಷಿಸಿವೆ.
ಆ ದಿನಗಳು ಎಲ್ಲಾ ರಾಜ್ಯಗಳ ಎಟಿಎಮ್‌ಗಳು ಕಾರ್ಯನಿರ್ವಹಿಸಲಿದೆ. ಆನ್‌ಲೈನ್ ಬ್ಯಾಂಕಿಂಗ್‌ಗೂ ಯಾವುದೇ ತೊಂದರೆಯಿಲ್ಲ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.