ನವದೆಹಲಿ: ‘ಕೋವಿಡ್ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್ ಔಷಧದ ಪೂರೈಕೆ ಈಗ ಬೇಡಿಕೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಇದನ್ನು ರಾಜ್ಯಗಳಿಗೆ ಹಂಚಿಕೆ ಮಾಡುವುದನ್ನು ನಿಲ್ಲಿಸಲಾಗಿದೆ’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಎಲ್. ಮಾಂಡವೀಯ ಶನಿವಾರ ತಿಳಿಸಿದ್ದಾರೆ.
‘ಏ.11 ರಂದು ರೆಮ್‌ಡಿಸಿವಿರ್ ಪೂರೈಕೆ ದಿನಕ್ಕೆ ಕೇವಲ 33 ಸಾವಿರ ವಯಲ್ ಇತ್ತು. ಈಗ ದಿನಕ್ಕೆ 3.50 ಲಕ್ಷ ವಯಲ್ ರೆಮ್‌ಡಿಸಿವಿರ್ ಪೂರೈಕೆ ಆಗುತ್ತಿದೆ. ಮೊದಲು 20 ರೆಮ್‌ಡಿಸಿವಿರ್ ತಯಾರಿಕಾ ಘಟಕಗಳಿದ್ದವು ಈಗ ಅದನ್ನು 60ಕ್ಕೆ ಹೆಚ್ಚಿಸಲಾಗಿದೆ. ತುರ್ತು ಸಂದರ್ಭಗಳಿಗಾಗಿ 50 ಲಕ್ಷ ವಯಲ್‌ನಷ್ಟು ರೆಮ್‌ಡಿಸಿವಿರ್ ಔಷಧವನ್ನು ಸಂಗ್ರಹಿಸಿಡಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ರೆಮ್‌ಡಿಸಿವಿರ್‌ಗೆ ದೇಶದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಏ.11ರಂದು ಅದರ ರಫ್ತನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.