ADVERTISEMENT

ಕೈದಿಗಳ ಸುರಕ್ಷತೆಗೆ ಆಧಾರ್ ದೃಢೀಕರಣ: ಕೇಂದ್ರ ಸರ್ಕಾರ

ಪಿಟಿಐ
Published 2 ನವೆಂಬರ್ 2023, 14:19 IST
Last Updated 2 ನವೆಂಬರ್ 2023, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೈದಿಗಳು ಮತ್ತು ಅವರನ್ನು ಕಾಣಲು ಜೈಲಿಗೆ ಬರುವ ಸಂದರ್ಶಕರು ಇನ್ನು ಮುಂದೆ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು. ಕೈದಿಗಳ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೈದಿಗಳಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದಕ್ಕೂ ಆಧಾರ್‌ ಅನ್ನು ಬಳಸಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ. 

ಕೈದಿಗಳು ಮತ್ತು ಅವರ ಸಂದರ್ಶಕರ ಆಧಾರ್ ಜೋಡಣೆ ಮತ್ತು ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಪ್ರಮಾಣೀಕೃತ ಕಾರ್ಯ ವಿಧಾನವನ್ನು (ಎಸ್ಒಪಿ) ನ್ಯಾಷನಲ್‌ ಇನ್‌ಫರ್ಮೆಟಿಕ್ಸ್‌ ಸೆಂಟರ್‌ (ಎನ್‌ಐಸಿ) ಮತ್ತು ಇ–ಪ್ರಿಸನ್ಸ್‌ ತಂಡವು ಸಿದ್ಧಪಡಿಸಿದೆ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. 

ಕೇಂದ್ರ ಸರ್ಕಾರವು ಕಾಲಕಾಲಕ್ಕೆ ರೂಪಿಸಿದ ಮಾರ್ಗಸೂಚಿಗಳನ್ನು ಆಧಾರ್ ದೃಢೀಕರಣದ ವೇಳೆ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.