ADVERTISEMENT

ಉದ್ಯಮಿ ಮುಕೇಶ್ ಅಂಬಾನಿಗೆ ಝೆಡ್ ಪ್ಲಸ್ ಭದ್ರತೆ

ಪಿಟಿಐ
Published 29 ಸೆಪ್ಟೆಂಬರ್ 2022, 17:35 IST
Last Updated 29 ಸೆಪ್ಟೆಂಬರ್ 2022, 17:35 IST
ಮುಖೇಶ್ ಅಂಬಾನಿ
ಮುಖೇಶ್ ಅಂಬಾನಿ   

ನವದೆಹಲಿ: ಉದ್ಯಮಿ ಮುಕೇಶ್ಅಂಬಾನಿಯ ಭದ್ರತೆಯನ್ನು ಕೇಂದ್ರ ಸರ್ಕಾರವು ಝೆಡ್ ಪ್ಲಸ್ ಶ್ರೇಣಿಗೆ ಹೆಚ್ಚಿಸಿದೆ. ಅಂಬಾನಿ ಅವರಿಗೆ ಇರುವ ಬೆದರಿಕೆ ಕುರಿತಂತೆ ಕೇಂದ್ರದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳ ಮಾಹಿತಿಯ ಪರಿಶೀಲನೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾಗಿರುವ 65 ವರ್ಷದ ಅಂಬಾನಿ ಅವರಿಗೆ 2013ರಿಂದ ಪಾವತಿ ಆಧಾರದ ಮೇಲೆ ಸಿಆರ್‌ಪಿಎಫ್ ಕಮಾಂಡೊಗಳ ಝೆಡ್ ಭದ್ರತೆ ಒದಗಿಸಲಾಗಿದೆ. ಅವರ ಹೆಂಡತಿ ನೀತಾ ಅಂಬಾನಿ ಅವರಿಗೂ ಸಶಸ್ತ್ರ ಪಡೆಯ ವೈ ಪ್ಲಸ್ ಭದ್ರತೆ ಇದೆ.

ಇತ್ತೀಚಿನ ಬ್ಲೂಮ್‌ಬರ್ಗ್ ಸೂಚ್ಯಂಕದ ಪ್ರಕಾರಮುಕೇಶ್,ವಿಶ್ವದ 10ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ADVERTISEMENT

ಅಂಬಾನಿ ಅವರ ಭದ್ರತೆಯನ್ನು ಝೆಡ್ ಪ್ಲಸ್ ಶ್ರೇಣಿಗೆ ಹೆಚ್ಚಿಸಿರುವ ಕುರಿತಂತೆ ಸಂಬಂಧಪಟ್ಟ ಸಂವಹನವನ್ನು ಸದ್ಯದಲ್ಲೇಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಂಬಾನಿಗೆ ಬರುತ್ತಿರುವ ಬೆದರಿಕೆಗಳ ಕುರಿತಂತೆ ಕೇಂದ್ರ ಗುಪ್ತಚರ ಸಂಸ್ಥೆ ಮತ್ತು ಭದ್ರತಾ ಸಂಸ್ಥೆಗಳ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಈ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.