ನವದೆಹಲಿ:ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವುದರ ನಡುವೆಯೇ,ಕೇಂದ್ರ ಸರ್ಕಾರವು ನೇಮಕಾತಿ ವಯೋಮಿತಿಯನ್ನು ಪರಿಷ್ಕರಿಸಿದೆ. 2022ರ ಸಾಲಿಗೆ ಅನ್ವಯಿಸಿ ಗರಿಷ್ಠ ವಯೋಮಿತಿಯನ್ನು 21 ವರ್ಷದ ಬದಲು 23 ವರ್ಷಕ್ಕೆ ಹೆಚ್ಚಿಸಿದೆ.
ಅಗ್ನಿಪಥ ಯೋಜನೆಯನ್ನು ಮಂಗಳವಾರ ಪ್ರಕಟಿಸಿದ್ದ ಸರ್ಕಾರ, ಹದಿನೇಳುವರೆ ವರ್ಷದಿಂದ 21ರ ನೇಮಕಾತಿ ವಯೋಮಿತಿಯವರು ನೇಮಕಾತಿಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿತ್ತು.
ಕಳೆದ 2 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗಿಲ್ಲ ಎಂಬ ಅಂಶವನ್ನು ಅರಿತು, ಸದ್ಯದ (ಪ್ರಸ್ತಾವಿತ) ನೇಮಕಾತಿ ವೇಳೆ ಒಂದು ಬಾರಿ ವಿನಾಯಿತಿ ನೀಡಲುಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಮಾಹಿತಿ ನೀಡಿದ್ದಾರೆ.
ಇವನ್ನೂ ಓದಿ
*ಅಗ್ನಿಪಥ ವಿರುದ್ಧ ಆಕ್ರೋಶ ತೀವ್ರ, ರೈಲು ಬೋಗಿಗಳಿಗೆ ಬೆಂಕಿ
*'ಅಗ್ನಿಪಥ' ವಿರೋಧಿಸಿ ಬಿಹಾರದಲ್ಲಿ ಮತ್ತೆ ರೈಲುಗಳಿಗೆ ಬೆಂಕಿ
*ಮಿಲಿಟರಿಯ ಹೊಸ ನೇಮಕಾತಿ ಯೋಜನೆ ಘೋಷಣೆ: ಏನಿದು ಅಗ್ನಿವೀರರ ಅಗ್ನಿಪಥ್?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.