ADVERTISEMENT

ಬ್ರಿಟಿಷ್ ಪೌರತ್ವ: ರಾಹುಲ್‌ ಗಾಂಧಿಗೆ ಗೃಹ ಸಚಿವಾಲಯ ನೋಟಿಸ್

ಏಜೆನ್ಸೀಸ್
Published 30 ಏಪ್ರಿಲ್ 2019, 7:34 IST
Last Updated 30 ಏಪ್ರಿಲ್ 2019, 7:34 IST
   

ನವದೆಹಲಿ:ಬ್ರಿಟಿಷ್ ಪೌರತ್ವ ಕುರಿತ ದೂರಿನ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.

ಬಿಜೆಪಿಯ ಹಿರಿಯ ನಾಯಕಸುಬ್ರಹ್ಮಣ್ಯಂ ಸ್ವಾಮಿ ಅವರು ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಬಿಟ್ರನ್ ಪೌರತ್ವನ್ನು ಮುಚಿಟ್ಟಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದರು.

ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದು, ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಬೇಕು ಎಂದು ಸುಬ್ರಹ್ಮಣ್ಯಂ ಸ್ವಾಮಿ ಆಗ್ರಹಿಸಿದ್ದರು.

ಈ ಸಂಬಂಧ ಕೇಂದ್ರ ಗೃಹಸಚಿವಾಲಯ ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು 15 ದಿನಗಳ ಒಳಗಾಗಿ ಉತ್ತರಿಸುವಂತೆ ಸೂಚನೆ ನೀಡಿದೆ.

ರಾಹುಲ್‌ ಗಾಂಧಿ ಅಮೇಠಿ ಕ್ಷೇತ್ರದಿಂದ ಸಲ್ಲಿಸಿರುವ ನಾಮಪತ್ರದ ಜತೆಗೆ ಕೊಟ್ಟಿರುವ ಪ್ರಮಾಣಪತ್ರದಲ್ಲಿ ಅವರ ಪೌರತ್ವದ ಬಗ್ಗೆಪಕ್ಷೇತರ ಅಭ್ಯರ್ಥಿ ಧ್ರುವಲಾಲ್‌ ಪ್ರಶ್ನೆ ಎತ್ತಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ರಾಹುಲ್‌ ಅವರು ಹೂಡಿಕೆ ಮಾಡಿದ್ದಾರೆ ಎನ್ನಲಾದ ಬ್ರಿಟನ್‌ ಕಂಪನಿಯೊಂದರ ದಾಖಲೆಯನ್ನು ಧ್ರುವಲಾಲ್‌ ಅವರ ವಕೀಲ ರವಿಪ್ರಕಾಶ್‌ ಮಾಧ್ಯಮದ ಮುಂದೆ ಪ್ರದರ್ಶಿಸಿದ್ದಾರೆ. ರಾಹುಲ್‌ ಅವರು ಬ್ರಿಟನ್‌ ಪ್ರಜೆ ಎಂದು ಈ ದಾಖಲೆಯಲ್ಲಿ ಇದೆ.ಈ ಕಂಪನಿಯುಐದು ವರ್ಷ ಅಸ್ತಿತ್ವದಲ್ಲಿತ್ತು. ಕಂಪನಿಯು ಲಾಭ ಗಳಿಸಿರುವ ಸಾಧ್ಯತೆ ಇದೆ. ಹಾಗಿದ್ದರೂ ಪ್ರಮಾಣಪತ್ರದಲ್ಲಿ ಈ ಲಾಭದ ಉಲ್ಲೇಖ ಇಲ್ಲ ಎಂದೂ ಅವರು ಆರೋಪಿಸಿದ್ದಾರೆ.

‘ಇನ್ನೊಂದು ದೇಶದ ನಾಗರಿಕರು ಭಾರತದಲ್ಲಿ ಸ್ಪರ್ಧಿಸಲುಸಂವಿಧಾನದಲ್ಲಿ ಅವಕಾಶ ಕಲ್ಪಿಸಿಲ್ಲ,’ ಎಂದು ಪ್ರಕಾಶ್‌ ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.