ADVERTISEMENT

ಗುಜರಾತ್‌ನಲ್ಲಿ ‘ತೌತೆ’ಯಿಂದ ಅಪಾರ ಹಾನಿ, ನಾಲ್ವರ ಸಾವು

ಪಿಟಿಐ
Published 18 ಮೇ 2021, 6:04 IST
Last Updated 18 ಮೇ 2021, 6:04 IST
ತೌತೆ ಚಂಡಮಾರುತ ಪರಿಣಾಮ ಸುರಿದ ಭಾರಿ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ದಿಯು ಬಳಿಯ ಹೆದ್ದಾರಿ ಮೇಲೆ ಮರಗಳು ಬಿದ್ದಿದ್ದು ಟ್ರಕ್‌ವೊಂದು ಸಿಲುಕಿರುವುದು ಮಂಗಳವಾರ ಕಂಡುಬಂತು –ಎಎಫ್‌ಪಿ ಚಿತ್ರ
ತೌತೆ ಚಂಡಮಾರುತ ಪರಿಣಾಮ ಸುರಿದ ಭಾರಿ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ದಿಯು ಬಳಿಯ ಹೆದ್ದಾರಿ ಮೇಲೆ ಮರಗಳು ಬಿದ್ದಿದ್ದು ಟ್ರಕ್‌ವೊಂದು ಸಿಲುಕಿರುವುದು ಮಂಗಳವಾರ ಕಂಡುಬಂತು –ಎಎಫ್‌ಪಿ ಚಿತ್ರ   

ಅಹಮದಾಬಾದ್‌: ‘ತೌತೆ’ ಚಂಡಮಾರುತದಿಂದಾಗಿ ಸುರಿದ ಮಳೆ ಹಾಗೂ ಸಂಭವಿಸಿದ ಅವಘಡದಲ್ಲಿ ಗುಜರಾತ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಭಾವನಗರ, ರಾಜಕೋಟ್‌, ಪಾಟನ್‌ ಹಾಗೂ ವಲ್ಸಾಡ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಪಶ್ಚಿಮ ಕರಾವಳಿಯ ಸೌರಾಷ್ಟ್ರ ಹಾಗೂ ಡಿಯು ಮತ್ತು ಉನಾ ಪ್ರದೇಶದಲ್ಲಿ ಆರಂಭಗೊಂಡಿದ್ದ ಭೂಕುಸಿತ ಪ್ರಕ್ರಿಯೆ ಸೋಮವಾರ ಮಧ್ಯರಾತ್ರಿ ನಿಂತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ADVERTISEMENT

ಭಾರಿ ಗಾಳಿ, ಮಳೆಯೊಂದಿಗೆ ರಾಜ್ಯದ ಕರಾವಳಿಯನ್ನು ಪ್ರವೇಶಿಸಿದ ‘ತೌತೆ’ , ಕ್ರಮೇಣ ದುರ್ಬಲಗೊಂಡಿತು. ಆದರೆ, ಸೌರಾಷ್ಟ್ರ ಭಾಗದ ಅಮ್ರೇಲಿ ಬಳಿ ಭಾರಿ ವೇಗದೊಂದಿಗೆ ಬೀಸಿದ ಮಾರುತದಿಂದಾಗಿ ಸಾಕಷ್ಟು ಹಾನಿಗೆ ಉಂಟಾಯಿತು ಎಂದು ಐಎಂಡಿ ತಿಳಿಸಿದೆ.

ಕರಾವಳಿ ಪ್ರವೇಶಿಸುವ ಸಂದರ್ಭದಲ್ಲಿ ಗಂಟೆಗೆ 135 ಕಿ.ಮೀ. ವೇಗದಿಂದ ಬೀಸುತ್ತಿದ್ದ ಗಾಳಿ, ಕ್ರಮೇಣ ತನ್ನ ತೀವ್ರತೆಯನ್ನು ಕಳೆದುಕೊಂಡಿತು. ಅಮ್ರೇಲಿಯಿಂದ 10 ಕಿ.ಮೀ. ದೂರದ ದಕ್ಷಿಣ ಭಾಗಕ್ಕೆ ಬಂದಾಗ ವೇಗವು ಗಂಟೆಗೆ 115–125 ಕಿ.ಮೀ.ಗೆ ಇಳಿಯಿತು. ದಿಯುನ ಉತ್ತರ ಹಾಗೂ ಈಶಾನ್ಯಕ್ಕೆ ಬಂದಾಗ ಅದರ ವೇಗ ಗಂಟೆಗೆ 95 ಕಿ.ಮೀ.ನಷ್ಟು ಆಯಿತು ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.